ಮಡಿಕೇರಿ, ಜೂ. 16: ಮುಂಬೈ ಮಹಿಳಾ ವಿಶ್ವವಿದ್ಯಾಲಯ (ಎಸ್.ಎನ್.ಡಿ.ಪಿ.ಐ) ಯ ಸಂಶೋಧನಾ ನಿರ್ದೇಶಕಿ ಆಗಿದ್ದ ಡಾ. ವೀಣಾ ರವಿ, ಪೂಣಚ್ಚ ಅವರಿಗೆ ಪ್ರತಿಷ್ಠಿತ ‘ ಪ್ರೈಡ್ ಆಫ್ ಇಂಡಿಯಾ’ ಪ್ರಶಸ್ತಿ ದೊರೆತಿದೆ.
ಮಡಿಕೇರಿಯ ಟಿಟ್ಟೂಸ್ ನಸಣ ಸಂಸ್ಥಾಪಕಿ ಟಿಟ್ಟೂ ಸುಬ್ಬಯ್ಯ ಅವರ ಪುತ್ರಿ ವೀಣಾ ಅವರ ಸಂಶೋಧನೆ, ಬೋಧನೆ ಹಾಗೂ 35 ಜಿಲ್ಲೆಗಳಲ್ಲಿ ಅವರು ಸ್ವಸಹಾಯ ಸಂಘ ಸ್ಥಾಪನೆಗೆ ಶ್ರಮಿಸಿದುದನ್ನು ಪರಿಗಣಿಸಿ ವಲ್ರ್ಡ್ ಕನ್ಸಲ್ಟಿಂಗ್ ಐಂಡ್ ರೀಸರ್ಚ್ ಕಾರ್ಪೋರೇಶನ್ ಪ್ರಶಸ್ತಿ ವಿತರಿಸಿದೆ. ಇವರೊಂದಿಗೆ ಸಿನೆಮಾ ನಟರಾದ ಕರೀನಾ ಕಪೂರ್, ಧರ್ಮೇಂದ್ರ, ಕಿರಣ್ ಬೇಡಿ ಹಾಗೂ ಇತರ ಐವತ್ತು ಸಾಧಕರಿಗೆ ಪ್ರಶಸ್ತಿ ನೀಡಲಾಗಿದೆ.