ಮಡಿಕೇರಿ ಜು.9: ತನ್ನ ಪತಿ ಮಾದಪಂಡ ಗಣಪತಿ ಅವರ ಸಾವಿನ ಹಿನ್ನೆಲೆಗೆ ಕಾರಣವಾದ ಶೋಷಣೆಯ ಕುರಿತಾಗಿ ಪ್ರಾಮಾಣಿಕ ತನಿಖೆ ನಡೆಯುವಂತೆ ದು:ಖತಪ್ತ ಪತ್ನಿ ಪವನ ಮನವಿ ಮಾಡಿದ್ದಾರೆ. ಇಂದು ತನ್ನ ಪತಿಯ ಮರಣೋತ್ತರ ಪರೀಕ್ಷೆ ಸಂದರ್ಭ ಸ್ಥಳದಲ್ಲಿದ್ದ ಅವರಿಗೆ ಸಾಂತ್ವನ ಹೇಳುವ ಮೂಲಕ “ಶಕ್ತಿ” ಮಾತನಾಡಿಸಿದಾಗ ಅವರು ಈ ಅಭಿಪ್ರಾಯ ವ್ಯಕ್ತಗೊಳಿಸಿದರು. ಸಾವಿನ ಹಿನ್ನೆಲೆ ಬಗ್ಗೆ ಪ್ರಶ್ನಿಸಿದಾಗ ನಿನ್ನೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತನ್ನ ಪತಿ ಗಣಪತಿ ಅವರು ನೀಡಿದ ಮುಕ್ತ ಹೇಳಿಕೆ ಸತ್ಯವಾಗಿದೆ. ಅವರ ಸಾವಿಗೆ ಅವರ ಮೇಲಿನ ಶೋಷಣೆಯೇ ಕಾರಣವಾಗಿದೆ ಎಂದು ಖಚಿತಪಡಿಸಿದರು.

ತಮ್ಮ ಅಂತರಾಳದ ನೋವನ್ನು ವ್ಯಕ್ತಪಡಿಸಿದ ಪವನ ಅವರು ಈ ರೀತಿಯ ಶೋಷಣೆಯಿಂದ ಮಾನಸಿಕ ನೋವು ಅನುಭವಿಸುತ್ತಿದ್ದ ತಮ್ಮ ಪತಿ ಕಳೆದ 2 ವರ್ಷಗಳಿಂದ ಕುಟುಂಬದೊಂದಿಗೂ ಸರಿಯಾಗಿ ಬೆರೆಯದೆ ವ್ಯಥೆಯಲ್ಲಿದ್ದರು ಎಂದು ನೊಂದು ನುಡಿದರು.ಈ ದಂಪತಿಗೆ ಇಬ್ಬರು ಪುತ್ರರು. ಪ್ರಥಮ ಪುತ್ರ ನೇಹಲ್ ನಿಟ್ಟೆ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದು, ಮತ್ತೋರ್ವ ಪುತ್ರ ಸಾಯಿ ಮಂಗಳೂರಿನಲ್ಲಿ ಎಸ್.ಎಸ್.ಎಲ್.ಸಿ ಓದುತ್ತಿದ್ದಾನೆ. ಇಬ್ಬರು ಪುತ್ರರೂ ಇಂದು ತಂದೆಯ ಮರಣೋತ್ತರ ಪರೀಕ್ಷೆ ಸಂದರ್ಭ ಸ್ಥಳದಲ್ಲಿದ್ದು