ಭಾಗಮಂಡಲ, ಜು. 30: ಸಿಗಾಳಿ ಜಾತಿಗೆ ಸೇರಿದ ಕಾಡು ಪ್ರಾಣಿಯೊಂದನ್ನು ಬೇಟೆಯಾಡಿದ ಮೂವರು ಆರೋಪಿಗಳನ್ನು ಕಳೆದ ರಾತ್ರಿ 2.30 ಗಂಟೆ ಸುಮಾರಿಗೆ ಅರಣ್ಯ ಇಲಾಖೆಯವರು ಬಂಧಿಸಿದ್ದಾರೆ.
ತಲಕಾವೇರಿ ವನ್ಯಧಾಮ ಹಾಗೂ ಮೀಸಲು ಅರಣ್ಯ ವ್ಯಾಪ್ತಿಯ ಮಾಡತ್ ಮಲೆಯಲ್ಲಿ ಘಟನೆ ನಡೆದಿದ್ದು, ಕೆ. ಸುಂದರ, ರಾಮಕೃಷ್ಣ ಹಾಗೂ ನಂದ ಎಂಬವರುಗಳನ್ನು ಬಂಧಿಸಲಾಗಿದೆ. 2 ಚೀಲಗಳಲ್ಲಿದ್ದ ಒಣ ಮಾಂಸ ವನ್ನು ವಶಪಡಿಸಿ ಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ ಕೋವಿ ಕೆ. ಚಿಣ್ಣಪ್ಪ ಎಂಬವರಿಗೆ ಸೇರಿದ್ದುದು ಎಂದು ತಿಳಿದು ಬಂದಿದೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಚಂಗಪ್ಪ, ಉಪ ಅರಣ್ಯಾಧಿಕಾರಿ ಶಶಿ, ನಾಗರಾಜ್, ಜಗದೀಶ್, ಪುನೀತ್, ಮಂಜುನಾಥ್, ಕಾರ್ಯಪ್ಪ, ಮುತ್ತಪ್ಪ, ರದೀಶ ಪಾಲ್ಗೊಂಡಿದ್ದರು.
-ಸುನಿಲ್/ ಸುಧೀರ್.