ಕುಶಾಲನಗರ, ಸೆ. 8: ಗುಡ್ಡೆಹೊಸೂರಿನಲ್ಲಿ ಹತ್ಯೆಗೊಳಗಾದ ಪ್ರವೀಣ್ ಪೂಜಾರಿ ಕುಟುಂಬಕ್ಕೆ ಸರಕಾರದಿಂದ ಬಿಡುಗಡೆಗೊಂಡ 5 ಲಕ್ಷ ರೂಗಳ ಪರಿಹಾರದ ಚೆಕ್ ಅನ್ನು ಅಪರ ಜಿಲ್ಲಾಧಿಕಾರಿ ಸತೀಶ್ಕುಮಾರ್ ಹಸ್ತಾಂತರಿಸಿದರು. ಮೃತನ ತಂದೆ ಚಂದಪ್ಪ ಅವರಿಗೆ ಪರಿಹಾರ ಧನದ ಚೆಕ್ ಹಾಗೂ ಕಂದಾಯ ಇಲಾಖೆಯಿಂದ ಸಂಧ್ಯಾ ಸುರಕ್ಷಾ ಯೋಜನೆಯಡಿ ಒದಗಿಸಲಾದ ಮಾಸಾಶನದ ದಾಖಲಾತಿಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭ ಸುದ್ದಿಗಾರ ರೊಂದಿಗೆ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸತೀಶ್ಕುಮಾರ್, ಕೋಮು ಗಲಭೆಯಿಂದ ಹತ್ಯೆಗೊಳ ಗಾದ ಪ್ರವೀಣ್ ಪೂಜಾರಿ ಸಾವಿನ ಕುರಿತು ಗೃಹ ಇಲಾಖೆಗೆ ಜಿಲ್ಲಾಡಳಿತದಿಂದ ಸಲ್ಲಿಸಿದ ವರದಿಗೆ ಪೂರಕವಾಗಿ ಸರಕಾರ ಬಿಡುಗಡೆ ಗೊಳಿಸಿದ ಪರಿಹಾರ ಧನವನ್ನು ಮೃತನ ಕುಟುಂಬಕ್ಕೆ ಹಸ್ತಾಂತರಿಸ ಲಾಗಿದೆ. ಹಾಗೂ ಎನ್ಎಸ್ಎಪಿ ಯೋಜನೆಯಡಿ ಒದಗಿಸಲಾಗುವ ರೂ 20 ಸಾವಿರ ಪರಿಹಾರ ಬಿಡುಗಡೆಗೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದೆಯೂ ಕೂಡ ಸರಕಾರದಿಂದ ಅಗತ್ಯ ಸೌಲಭ್ಯಗಳನ್ನು ಜಿಲ್ಲಾಡಳಿತದ ಮೂಲಕ ಒದಗಿಸಲು ಅಗತ್ಯ ಕ್ರಮಕೈಗೊಳ್ಳುವದಾಗಿ ಅವರು ಮಾಹಿತಿ ನೀಡಿದರು.
ಈ ಸಂದರ್ಭ ಸೋಮವಾರ ಪೇಟೆ ತಾಲೂಕು ತಹಶೀಲ್ದಾರ್ ಜಿ.ಎಸ್. ಕೃಷ್ಣ, ಗ್ರಾಮ ಲೆಕ್ಕಿಗ ಗೌತಮ್ ಮತ್ತು ಸಿಬ್ಬಂದಿಗಳು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸತೀಶ್ ಇದ್ದರು.