ಮಡಿಕೇರಿ, ಜು. 28: ಮಡಿಕೇರಿಯ ಪ್ರವಾಸಿ ಕಾರು ಮಾಲೀಕರ ಹಾಗೂ ಚಾಲಕರ ಸಂಘದ ನೂತನ ಅಧ್ಯಕ್ಷರಾಗಿ ಬಿ.ವಿ. ವೀರೇಂದ್ರ ಆಯ್ಕೆ ಆಗಿದ್ದಾರೆ. ಕೊಡವ ಸಮಾಜ ಕಟ್ಟಡದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆದು, ಉಪಾಧ್ಯಕ್ಷರಾಗಿ ಬಿ.ಎಸ್. ಸುರೇಶ್, ಪ್ರಧಾನ ಕಾರ್ಯದರ್ಶಿಯಾಗಿ ಲೋಕೇಶ್, ಉಪಕಾರ್ಯದರ್ಶಿಯಾಗಿ ಸಿದ್ಧರಾಜು, ಖಜಾಂಚಿಯಾಗಿ ಆರ್. ಸುರೇಶ್ ಆಯ್ಕೆ ಆಗಿದ್ದಾರೆ.
ಆಡಳಿತ ಮಂಡಳಿ ಸದಸ್ಯರಾಗಿ ತಿರುಪತಿ, ರವಿ, ಪ್ರಮೋದ್ ಆ್ಯಂಟೋ, ಗಣೇಶ್, ಸ್ವಾಮಿ, ಕಾನೂನು ಸಲಹೆಗಾರರಾಗಿ ಸಜನ್ ನಾಯಕ್, ಗೌರವಾಧ್ಯಕ್ಷರಾಗಿ ಜಿ.ಜೆ. ಸೋನ್ಸ್ ಆಯ್ಕೆ ಆದರು.