ಗೋಣಿಕೊಪ್ಪಲು, ನ. 19: ವಿಶ್ವ ಆರೋಗ್ಯ ಸಂಸ್ಥೆಯು 2011ರಿಂದ ಭಾರತವನ್ನು ಪೆÇೀಲಿಯೋ ಮುಕ್ತ ರಾಷ್ಟ್ರ ಎಂದು ಘೋಷಣೆ ಮಾಡಿದೆ. ನೆರೆಯ ರಾಷ್ಟ್ರ ಪಾಕಿಸ್ತಾನ ಒಳಗೊಂಡಂತೆ ಮೂರು ರಾಷ್ಟ್ರಗಳಲ್ಲಿ ಪೆÇೀಲಿಯೋ ಇನ್ನೂ ಇದ್ದು, ಭಾರತಕ್ಕೆ ನೆರೆಯ ರಾಷ್ಟ್ರಗಳಿಂದ ಪೆÇೀಲಿಯೋ ವೈರಾಣು ಹರಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ರೋಗ ನಿರೋಧಕ ಶಕ್ತಿಗಾಗಿ ಪೆÇೀಲಿಯೋ ಲಸಿಕೆಯನ್ನು ನಿರಂತರ ಹಾಕಿಸಿಕೊಳ್ಳಬೇಕಾಗಿದೆ ಎಂದು 3181ರೋಟರಿ ವಲಯ 6ರ ಜಿಲ್ಲಾ ರಾಜ್ಯಪಾಲ ಡಾ. ಆರ್.ಎಸ್. ನಾಗಾರ್ಜುನ್ ಮಾಹಿತಿ ನೀಡಿದರು.

ಗೋಣಿಕೊಪ್ಪಲು ರೋಟರಿ ಸಂಸ್ಥೆಯ ಕಾರ್ಯಚಟುವಟಿಕೆ ವೀಕ್ಷಣೆಗೆ ಆಗಮಿಸಿದ ಅವರು ತಾ. 18 ರ ಸಂಜೆ ಸಿಲ್ವರ್ ಸ್ಕೈ ಹೊಟೇಲ್ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಇಲ್ಲಿನ ಟೆಲಿಕಾಂನ ನಿಷ್ಠಾವಂತ ನೌಕರ ಪಿ.ಜಿ. ಅಣ್ಣು ದಂಪತಿಗಳನ್ನು ಸನ್ಮಾನಿಸಿ ಮಾತನಾಡಿದರು.

ದೇಶದ ನವದೆಹಲಿ ಒಳ ಗೊಂಡಂತೆ ಪ್ರಮುಖ ಮಹಾ ನಗರಗಳಲ್ಲಿ ಉಸಿರಾಡುವ ಆಮ್ಲ ಜನಕದ ಕೊರತೆ ಇದೆ. ಆದರೆ ಕೊಡಗಿನ ಜನ ಪುಣ್ಯವಂತರು. ಮಡಿಕೇರಿ, ಗೋಣಿಕೊಪ್ಪಲು ಒಳ ಗೊಂಡಂತೆ ಓಡಾಡಲು ಆಹ್ಲಾದಕರ ವಾತಾವರಣವಿದೆ. ರೋಟರಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಎಲ್ಲರೂ ಕೊಡಗಿನ ಸುಂದರ ಪರಿಸರವನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಊಟಿಯಲ್ಲಿ ರೋಟರಿ ವಲಯ 6 ರ ಅಧಿವೇಶನವನ್ನು ಜನವರಿಯಲ್ಲಿ ಏರ್ಪಡಿಸಲಾಗಿದ್ದು, ಜಿಲ್ಲೆಯ ರೋಟರಿಯನ್‍ಗಳು ಕೊಡವ ಸಾಂಪ್ರದಾಯಿಕ ಉಡುಗೆ-ತೊಡುಗೆಯಲ್ಲಿಯೇ ಪ್ರತಿನಿಧಿಸಲು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ರೋಟರಿ ಸಂಸ್ಥೆಯ ವಾರ್ಷಿಕ ಕಾರ್ಯಚಟುವಟಿಕೆ ಕುರಿತಾದ ಹೊತ್ತಿಗೆಯನ್ನು ವಲಯ ಲೆಫ್ಟಿನೆಂಟ್ ಪಿ.ಬಿ. ಪೂಣಚ್ಚ ಬಿಡುಗಡೆಗೊಳಿಸಿದರು. ‘ರೋಟರಿ ಬುಲೆಟಿನ್’ ಅನ್ನು ಅಂದವಾಗಿ ಹೊರತಂದ ಸಂಪಾದಕಿ ಸುಷ್ಮಾ ಚಂಗಪ್ಪ ಅವರನ್ನು ಪ್ರಶಂಸಿಸಲಾಯಿತು.

ವೇದಿಕೆಯಲ್ಲಿ ಅತಿಥಿ ಸುಧಾ ನಾಗಾರ್ಜುನ್, ವಲಯ 6 ರ ಸಹ ರಾಜ್ಯಪಾಲ ಡಾ. ಸಿ.ಆರ್. ಪ್ರಶಾಂತ್, ಖಜಾಂಚಿ ವಿಜಯ್ ಮಚ್ಚಾಮಾಡ ಮುಂತಾದವರು ಉಪಸ್ಥಿತರಿದ್ದರು.

ಡಾ. ಚಂದ್ರಶೇಖರ್ ಅತಿಥಿ ಪರಿಚಯ ಮಾಡಿದರು. ಪ್ರಾರ್ಥನೆ ನೀರಜ್ ಕುಶಾಲಪ್ಪ, ನಿರೂಪಣೆ ಶ್ರೀಮತಿ ನೆವಿನ್, ಸ್ವಾಗತ ರೋಟರಿ ಅಧ್ಯಕ್ಷ ಟಿ.ಯು. ನರೇಂದ್ರ ಹಾಗೂ ವಂದನಾರ್ಪಣೆಯನ್ನು ಕಾರ್ಯದರ್ಶಿ ಕೆ.ಬಿ. ನೆವಿನ್ ನಿರ್ವಹಿಸಿದರು.

ಕೊಡಗು ಜಿಲ್ಲೆ ಹಾಗೂ ಪಿರಿಯಾಪಟ್ಟಣ ಇತರೆಡೆಗಳಿಂದ ರೋಟರಿ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು.