ಮಡಿಕೇರಿ, ಅ. 8: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್- 398 ಹುದ್ದೆಗಳು- ಅರ್ಜಿಗಳನ್ನು ಆನ್ಲೈನಲ್ಲಿ ತಾ. 13 ರೊಳಗೆ, ನಾಗರಿಕ ಪೊಲೀಸ್ ಕಾನ್ಸ್ಟೇಬಲ್- 3477 ಹುದ್ದೆಗಳು - ಅರ್ಜಿಗಳನ್ನು ಆನ್ಲೈನಲ್ಲಿ ತಾ. 17 ರೊಳಗೆ, ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್- 1834 ಹುದ್ದೆಗಳು-ಅರ್ಜಿಗಳನ್ನು ಆನ್ಲೈನಲ್ಲಿ ತಾ. 17 ರೊಳಗೆ, ಮೀಸಲು ಪೊಲೀಸ್ ಕಾನ್ಸ್ಟೇಬಲ್- 849 ಹುದ್ದೆಗಳು- ಅರ್ಜಿಗಳನ್ನು ಆನ್ಲೈನಲ್ಲಿ ನ. 2 ರೊಳಗೆ ಹಾಗೂ ಪೊಲೀಸ್ ಕಾನ್ಸ್ಟೇೀಬಲ್ (ಕೆ.ಎಸ್.ಐ.ಎಸ್.ಎಫ್) -396 ಹುದ್ದೆಗಳು ಅರ್ಜಿಗಳನ್ನು ಆನ್ಲೈನಲ್ಲಿ ನ. 2 ರೊಳಗೆ ಸಲ್ಲಿಸಬೇಕು.
ಈ ಎಲ್ಲಾ ಹುದ್ದೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ, ಇತ್ಯಾದಿ ಮಾಹಿತಿಗಳನ್ನು hಣಣಠಿ://ಞsಠಿ.gov.iಟಿ ನಲ್ಲಿ ಪಡೆಯಬಹುದಾಗಿರುತ್ತದೆ. ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಸಿ. ಜಗನ್ನಾಥ ತಿಳಿಸಿದ್ದಾರೆ.