ಮಡಿಕೇರಿ, ನ. 11: ಜಿಲ್ಲೆಯಲ್ಲಿ ಈ ಹಿಂದೆ ನಡೆದಂತಹ ಗೌರಿಗಣೇಶ ಹಬ್ಬ, ದಸರಾ ಉತ್ಸವ, ತಲಕಾವೇರಿ ಜಾತ್ರೆ, ಬಕ್ರೀದ್ ಹಬ್ಬ, ರಂಜಾನ್ ಹಬ್ಬ ಹಾಗೂ ಇದೀಗ ಮುಕ್ತಾಯಗೊಂಡಿರುವ ಟಿಪ್ಪು ಜಯಂತಿ ಆಚರಣೆಯ ಸಮಯದಲ್ಲಿ ಶಾಂತ ರೀತಿಯಿಂದ ಯಾವದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಉತ್ತಮವಾಗಿ ಪೊಲೀಸ್ ಇಲಾಖೆಯೊಂದಿಗೆ ಜಿಲ್ಲೆಯ ಎಲ್ಲಾ ಸಮಾಜದ ಮುಖಂಡರು, ಸಂಘ-ಸಂಸ್ಥೆಯವರು, ಚುನಾಯಿತ ಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು, ಮಾಧ್ಯಮ ಮತ್ತು ಪತ್ರಿಕಾ ಮಿತ್ರರು ಹಾಗೂ ಜಿಲ್ಲೆ ಎಲ್ಲಾ ಶಾಂತಿಪ್ರಿಯ ಸಾರ್ವಜನಿಕ ಮಿತ್ರರು ಕೈಜೋಡಿಸಿ ಸಹಕರಿಸಿದ್ದಾರೆ.
ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರದೊಂದಿಗೆ ಪೊಲೀಸ್ ಇಲಾಖೆ ಜನ ಸಾಮಾನ್ಯರೊಂದಿಗೆ ಬೆರೆತು ‘ಜನಸ್ನೇಹಿ ಪೊಲೀಸ್ರಾಗಿ’ ಸಾರ್ವಜನಿಕರ ಪ್ರಸಂಶಗೆ ಪಾತ್ರವಾಗಲು ಸಹಕಾರಿಯಾಗಿದೆ. ಸಾರ್ವಜನಿP Àರೊಂದಿಗೆ ಪೊಲೀಸ್ ಬಾಂಧವ್ಯ ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳನ್ನು ಇಲಾಖೆಯ ವತಿಯಿಂದ ಹಮ್ಮಿಕೊಳ್ಳುತ್ತಿದ್ದು, ಇನ್ನು ಮುಂದೆಯೂ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಇಲಾಖೆಯೊಂದಿಗೆ ಸಹಕರಿಸುವಂತೆ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಜೇಂದ್ರ ಪ್ರಸಾದ್ ಕೋರಿದ್ದಾರೆ.