ವೀರಾಜಪೇಟೆ, ಆ.2 : ತಿತಿಮತಿ ಬಳಿಯ ದೇವಮಚ್ಚಿ ಅರಣ್ಯ ಪ್ರದೇಶ, ಮಜ್ಜಿಗೆ ಹಳ್ಳ ಸುತ್ತ ಮುತ್ತಲ ಪ್ರದೇಶದಲ್ಲಿ ಕೃಷಿ ಮಾಡಿಕೊಂಡಿದ್ದ ಸುಮಾರು 180 ಕುಟುಂಬಗಳಿಗೆ ಪುನರ್ವಸತಿ ಯೋಜನೆಯಲ್ಲಿ ಅರಣ್ಯ ಇಲಾಖೆ ವಂಚಿಸಿದೆ ಎಂಬ ಆರೋಪದ ಮೇರೆ ಗೂಡ್ಲೂರು ಗ್ರಾಮದಲ್ಲಿ ಪುನರ್ವಸತಿ ಯೋಜನೆ ಯಲ್ಲಿ ನೆಲೆ ನಿಂತಿರುವ ಸಂತ್ರಸ್ತ ಕುಟುಂಬಗಳು ಜಾತ್ಯತೀತ ಜನತಾ ದಳದ ಜಿಲ್ಲಾ ಸಮಿತಿಯ ಕಾರ್ಯಾ ಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅವರ ನೇತೃತ್ವದಲ್ಲಿ ಶಾಂತಿಯುತ ಧರಣಿ ಪ್ರತಿಭಟನೆ ನಡೆಸಲು ತೀರ್ಮಾನಿಸಿವೆ.
ಗೂಡ್ಲೂರಿನ ಸಮುದಾಯ ಭವನದಲ್ಲಿ ನಡೆದ ಸಂತ್ರಸ್ತ ಕುಟುಂಬ ಗಳ ಪ್ರಮುಖರ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳ ಲಾಗಿದ್ದು, ಮುಷ್ಕರದಲ್ಲಿ ಕುಟುಂಬದ ಪುರುಷರು, ಮಹಿಳೆ ಯರು, ಮಕ್ಕಳು ಪಾಲ್ಗೊಳ್ಳುವಂತೆ ಸಭೆ ನಿರ್ಧರಿಸಿತು.
ಸಭೆಯಲ್ಲಿ ಮಾತನಾಡಿದ ಸಂಕೇತ್ ಪೂವಯ್ಯ ಅವರು ಕೊಡಗಿನ ಆನೆ ಚೌಕೂರು, ದೇವಮಚ್ಚಿ, ಮಜ್ಜಿಗೆ ಹಳ್ಳ ವಿವಿಧ ಪ್ರದೇಶಗಳಲ್ಲಿ ಮನೆ ಕಟ್ಟಿಕೊಂಡು 5ಎಕರೆಯಿಂದ 8ಎಕರೆವರೆಗೆ ಕೃಷಿ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದ 180 ಕುಟುಂಬಗಳನ್ನು ಅರಣ್ಯ ಕಾಯಿದೆಯನ್ನು ಅನುಸರಿಸಿ 1978ರಲ್ಲಿ ಚೆÀನ್ನನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಂಗಿ ಮೂಡಾಬೈಲು, ಗೂಡ್ಲೂರು ಅರಣ್ಯ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಲಾಯಿತು. ಸ್ಥಳಾಂತರದ ಸಂದರ್ಭದಲ್ಲಿ ತಿತಿಮತಿಯ ಅರಣ್ಯ ಇಲಾಖೆಯ ಅಧಿಕಾರಿಗಳು, ಕುಟುಂಬಗಳಿಗೆ ತಲಾ 5 ಎಕರೆ ಜಾಗ, ರೂ. 5000 ನಗದು ಎಲ್ಲಾ ಹಾಗೂ ಮೂಲ ಸೌಲಭ್ಯಗಳನ್ನು ಕಲ್ಪಿಸುವದಾಗಿ ಭರವಸೆ ನೀಡಿದರು.
ಅಧಿಕಾರಿಗಳ ಒತ್ತಾಯ ಹಾಗೂ ಭರವಸೆ ಮೇರೆ ಕುಟುಂಬಗಳು ಕೃಷಿ ಮಾಡಿದ ತೋಟ, ಗದ್ದೆಯನ್ನು ತೊರೆದು ಗೂಡ್ಲೂರು ಅರಣ್ಯ ಪ್ರದೇಶಕ್ಕೆ ಸ್ಥಳಾಂತರಗೊಂಡರು. ಆದರೆ ಅಲ್ಲಿ ಸಂತ್ರಸ್ತ ಕುಟುಂಬಗಳಿಗೆ ತಲಾ 1 ಎಕರೆಯಿಂದ 2 ಎಕರೆವರೆಗೆ ಜಾಗ, ರೂ 5000 ನಗದು ನೀಡಲಾಯಿತು. ಈ ಸಣ್ಣ ಪ್ರಮಾಣದ ಜಾಗದಲ್ಲಿ ಏನೇ ಕೃಷಿ ಮಾಡಿದರೂ ಜೀವನ ಸುಧಾರಿ ಸುತ್ತಿಲ್ಲ. ಅರಣ್ಯ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಮನವಿಗೆ ಸ್ಪಂದಿಸದ್ದರಿಂದ ಆರ್ಥಿಕವಾಗಿ ಹಿಂದುಳಿದು ದುಸ್ತರ ಜೀವನ ಸಾಗಿಸುವಂತಾಗಿದೆ. ದಿನದ ಕೂಲಿಗೂ ಗತಿ ಇಲ್ಲದೆ ಎಲ್ಲ ಕುಟುಂಬಗಳು ಸಂಕಷ್ಟದಲ್ಲಿದ್ದಾರೆ. ಈ ಕುಟುಂಬಗಳಿಗೆ ಪರಿಹಾರ ಒದಗಿಸಲೇಬೇಕು. ಗೂಡ್ಲೂರು ಒತ್ತಿನಲ್ಲಿರುವ ತಟ್ಟಳ್ಳಿ, ದಿಡ್ಡಳ್ಳಿ ಪೈಸಾರಿ ಅರಣ್ಯ ಪ್ರದೇಶದಲ್ಲಿ ಆದ್ಯತೆ ಮೇರೆ ಈ ಸಂತ್ರಸ್ತರಿಗೆ ಭರವಸೆಯಂತೆ ಒಟ್ಟು 5 ಎಕರೆ ಜಾಗ ತಕ್ಷಣ ಮಂಜೂರು ಮಾಡಬೇಕು.
ಕೊಡಗಿನ ಬುಡಕಟ್ಟು ಕೃಷಿಕರು, ಮೂಲ ಆದಿ ನಿವಾಸಿಗಳು ತಟ್ಟಹಳ್ಳಿ, ದಿಟ್ಟಳ್ಳಿ ಸುತ್ತ ಮುತ್ತ ಪ್ರದೇಶಗಳಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಿರುವ ವರಿಗೂ ಬಡವರ ಸೂರಿನ ಯೋಜನೆ ಯಲ್ಲಿ ಜಾಗ ಮಂಜೂರಾತಿಯೊಂದಿಗೆ ಇವರ ಬೇಡಿಕೆಗಳನ್ನು ಸರಕಾರ ಪರಿಶೀಲಿಸಿ ಸ್ಪಂದಿಸಬೇಕು. ಗೂಡ್ಲೂರು ಸಂತ್ರಸ್ತರು, ಅರ್ಹ ಫಲಾನುಭವಿಗಳಿಗೆ ಅಗತ್ಯ ಜಾಗ ಮಂಜೂರಾತಿಗೆ ಜನತಾದಳ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸರಕಾರಕ್ಕೆ ಬೇಡಿಕೆ ಸಲ್ಲಿಸಲಿದೆ. ಜೊತೆಗೆ ಅರಣ್ಯಾಧಿಕಾರಿ ಗಳ ಕಚೇರಿ ಮುಂದೆ ನಡೆಯುವ ಶಾಂತಿಯುತ ಧರಣಿ ಮುಷ್ಕರವನ್ನು ಪಕ್ಷ ನೇರವಾಗಿ ಬೆಂಬಲಿಸಲಿದೆ. ಸರಕಾರದ ಇಬ್ಬಗೆಯ ನೀತಿಯನ್ನು ಪಕ್ಷ ಖಂಡಿಸುವದಾಗಿ ಹೇಳಿದರು.
ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಆರ್.ಸುರೇಶ್ ಮಾತನಾಡಿ, ಸಂತ್ರಸ್ತರ, ಬುಡಕಟ್ಟು ಕೃಷಿಕರ, ಮೂಲ ಆದಿವಾಸಿಗಳಿಗೆ ಎಲ್ಲರ ಸಹಕಾರದಿಂದ ನ್ಯಾಯ ದೊರಕಿಸಿ ಕೊಡುವ ಕಾರ್ಯಕ್ಕೆ ಪಕ್ಷ ನೇರವಾಗಿ ಸ್ಪಂದಿಸಿ ಕಾರ್ಯಕರ್ತರು ಪ್ರತಿಭಟನೆ ಹಾಗೂ ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಪೂರ್ವಭಾವಿ ಸಭೆಯಲ್ಲಿ ಪಿ.ವಿ.ರೆನ್ನಿ, ಗೂಡ್ಲೂರು ಸಂತ್ರಸ್ತರ ಪ್ರಮುಖರಾದ ಜಿ.ಬಿ. ಸೋಮಯ್ಯ, ಎಂ.ಕೆ. ರಘುನಂದ, ಎಂ.ಕೆ. ವಸಂತ್, ಕಿರಣ್, ಧನಂಜಯ್, ಕುಟುಂಬದ ಪುರುಷರು, ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಭೆಯ ನಂತರ ಗೂಡ್ಲೂರು ಪ್ರದೇಶಕ್ಕೆ ಒತ್ತಾಗಿರುವ ಅರಣ್ಯ ಪ್ರದೇಶವನ್ನು ಸಭೆಯ ಪ್ರಮುಖರು ವೀಕ್ಷಿಸಿದರು.