ಸಿದ್ದಾಪುರ, ನ. 12: ಸಿದ್ದಾಪುರ ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಪುಂಡಾನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆ ಇಂದು ಬೆಳಗ್ಗಿನಿಂದಲೇ ಅರಣ್ಯ ಇಲಾಖೆ ಕೈಗೊಂಡಿದೆ. ಸಿದ್ದಾಪುರ ಟಾಟಾ ಕಂಪೆನಿಗೆ ಸೇರಿದ ಎಮ್ಮೆಗುಂಡಿ, ಬಿ.ಬಿ.ಟಿಸಿ ಕಂಪೆನಿಗೆ ಸೇರಿದ ಬೀಟಿಕಾಡಿನಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭ ಮೂರು ಕಾಡಾನೆಗಳು ಪತ್ತೆಯಾದವು ಆದರೆ ಅರಣ್ಯ ಇಲಾಖಾ ಸಿಬ್ಬಂದಿಗಳಿಗೆ ಪುಂಡಾನೆಗಳು ಕಾಣಸಿಗಲಿಲ್ಲ.