ವೀರಾಜಪೇಟೆ, ಅ. 1: ವೀರಾಜಪೇಟೆ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ 2015-16ನೇ ಸಾಲಿನಲ್ಲಿ ರೂ 5,09,500 ನಿವ್ವಳ ಲಾಭಗಳಿಸಿ ಪ್ರಗತಿ ಪಥದಲ್ಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬೊಟ್ಟಂಗಡ.ಬಿ. ಮುತ್ತಪ್ಪ ತಿಳಿಸಿದರು.ವೀರಾಜಪೇಟೆ ಪುರಭವನದಲ್ಲಿ ನಡೆದ ಬ್ಯಾಂಕ್‍ನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾರ್ಚ್ 31ಕ್ಕೆ ಬ್ಯಾಂಕ್ 2317 ಸದಸ್ಯರುಗಳು ಹಾಗೂ ರೂ 74,58,330 ಪಾಲು ಬಂಡವಾಳವನ್ನು ಹೊಂದಿದೆ. ವರ್ಷಾಂತ್ಯಕ್ಕೆ ಠೇವಣಿಗಳ ಮೊತ್ತ ರೂ 93,91,056 ಆಗಿದ್ದು ಠೇವಣಿ ಮೊತ್ತ ಕಳೆದ ಸಾಲಿಗಿಂತ ರೂ 19,96,570 ಹೆಚ್ಚಳವಾಗಿದೆ. ಸಾಲ ವಸೂಲಾತಿಯಲ್ಲಿ ಶೇ. 86.46ರಷ್ಟು ಸಾಧನೆ ಮಾಡಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಬ್ಯಾಂಕ್‍ನ ಉತ್ತಮ ಕಾರ್ಯ ವೈಖರಿ ಕುರಿತು ಬೆಂಗಳೂರಿನ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಪ್ರಶಂಸನಾ ಪತ್ರ ನೀಡಿ ಗೌರವಿಸಿದೆ ಎಂದು ಹೇಳಿದರು.

ಪ್ರಸಕ್ತ ಸಾಲಿನಲ್ಲಿ 350 ಲಕ್ಷಗಳ ಸಾಲದ ಹಂಚಿಕೆ ಬಂದಿದ್ದು ಇದನ್ನು ಅರ್ಹ ಫಲಾನುಭವಿಗಳಿಗೆ ಹಂಚಲಾಗುವದು. ಬ್ಯಾಂಕ್ ಪ್ರಗತಿಯತ್ತ ಸಾಗಲು ಬ್ಯಾಂಕ್ ಸಿಬ್ಬಂದಿಗಳು ಉತ್ತಮ ಸೇವೆಯ ಬಗ್ಗೆಯು ಮುತ್ತಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಬ್ಯಾಂಕ್‍ನ ಆಡಳಿತ ಮಂಡಳಿಯ ಉಪಾಧ್ಯಕ್ಷ ಬಾನಂಡ.ಕೆ. ಅಶೋಕ್ ಕುಮಾರ್, ನಿರ್ದೇಶಕರುಗಳಾದ ಕೆ.ಎನ್. ವಿಶ್ವನಾಥ್, ಪಿ.ಬಿ.ದಯಾನಂದ, ಕೆ.ಪಿ. ನಾಗರಾಜು, ಎಂ.ಕೆ. ಕಾವೇರಿಯಪ್ಪ, ಕೆ.ಬಿ. ಪ್ರತಾಪ್, ಎಂ.ಎಂ. ಪೆಮ್ಮಯ್ಯ, ಬಿ.ಕೆ. ತಂಗಮ್ಮ, ಎಂ.ಬಿ. ಶೀಲು, ವಿ.ಎ. ಅಪ್ಪಚ್ಚು, ಸಿ.ಬಿ. ನಂಜಪ್ಪ, ಸಿ.ಸಿ. ಚಂಗಪ್ಪ ಉಪಸ್ಥಿತರಿದ್ದರು. ಬ್ಯಾಂಕ್‍ನ ವ್ಯವಸ್ಥಾಪಕ ಕೆ.ಆರ್. ಬಾಲಕೃಷ್ಣ ನಿರೂಪಿಸಿದರು.