ಮೂರ್ನಾಡು, ಸೆ. 28: ಹೊದ್ದೂರು ಪಾಲೇಮಾಡುವಿನಲ್ಲಿರುವ ಪೈಸಾರಿ ಜಾಗದ ಸರ್ವೆ ಕಾರ್ಯವನ್ನು ಕಂದಾಯ ಇಲಾಖೆ ಪೊಲೀಸ್ ಬಂದೋಬಸ್ತ್‍ನಲ್ಲಿ ನಡೆಸಿತು.ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪಾಲೇಮಾಡುವಿನ ಪೈಸಾರಿ ಜಾಗದಲ್ಲಿ 12.70 ಏಕರೆ ಜಾಗವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಸ್ಟೇಡಿಯಂ ನಿರ್ಮಾಣ ಮಾಡಲು ಮಂಜೂರು ಮಾಡ ಲಾಗಿದೆ. ಉಳಿದ ಪೈಸಾರಿ ಜಾಗವನ್ನು ಸರ್ವೆ ನಡೆಸುವ ಸಲುವಾಗಿ ಬುಧವಾರ ಕಂದಾಯ ಇಲಾಖೆ ಸ್ಥಳಕ್ಕೆ ಆಗಮಿಸಿದ ವೇಳೆಯಲ್ಲಿ ಸ್ಥಳೀಯ ನಿವಾಸಿಗಳು ಸ್ಮಶಾನ ಜಾಗವನ್ನು ಬಿಟ್ಟು ಕೊಡಬೇಕು ಎಂದು ಇಲಾಖೆಯವ ರೊಂದಿಗೆ ಆಗ್ರಹಿಸಿದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕೊಡಗಿನಲ್ಲಿ ಸ್ಟೇಡಿಯಂ ನಿರ್ಮಿಸಲು ಉದ್ದೇಶಿಸಿದ ಹಿನ್ನೆಲೆಯಲ್ಲಿ ಪಾಲೇಮಾಡುವಿನ ಸರ್ವೆ ನಂ. 167/1ಎ ರಲ್ಲಿನ ಪೈಸಾರಿ ಜಾಗದಲ್ಲಿ ಸ್ಥಳ ಗುರುತಿಸಿ ಸಂಸ್ಥೆಯ ಹೆಸರಿಗೆ
12.70 ಏಕರೆ ಜಾಗವನ್ನು ನೀಡಲಾಗಿದೆ.