ಮಡಿಕೇರಿ, ಆ. 20: ಕೊಡಗು ಬೆಳೆಗಾರರ ಸಂಘದ ಸಭೆ ಇಂದು ಕೂರ್ಗ್ ಇಂಟರ್ನ್ಯಾಷನಲ್ ಹೊಟೇಲ್ನಲ್ಲಿ ಏರ್ಪಾಡಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಬೆಳೆಗಾರರು ಭಾಗವಹಿಸಿದ್ದರು. ಅಷ್ಟೇ ಸಂಖ್ಯೆಯಲ್ಲಿ ಅವರುಗಳ ವಾಹನಗಳು ಕೂಡ ಆಗಮಿಸಿದ್ದವು. ಹೊಟೇಲ್ನಲ್ಲಿ ಕೆಲವೇ ವಾಹನ ನಿಲುಗಡೆಗೆ ಮಾತ್ರ ಅವಕಾಶವಿರುವದರಿಂದ ಎಲ್ಲಾ ವಾಹನಗಳು ರಸ್ತೆ ಬದಿಯಲ್ಲಿ ನಿಲ್ಲಿಸಲ್ಪಟ್ಟಿದ್ದವು. ಕಿರಿದಾದ ರಸ್ತೆಯ ಬದಿಯಲ್ಲಿ ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸಿದ್ದರಿಂದ ಮಧ್ಯಾಹ್ನದ ವೇಳೆ ಶಾಲೆ ಬಿಡುವ ಸಮಯದಲ್ಲಿ ವಾಹನ ದಟ್ಟಣೆ ಎದುರಾಯಿತು. ಹೆಚ್ಚು ಕಮ್ಮಿ ಒಂದು ಗಂಟೆಗಳ ಕಾಲ ವಾಹನ ಚಾಲಕರು ಪರದಾಡಬೇಕಾದ ಪ್ರಸಂಗ ಎದುರಾಯಿತು.
ಎಸ್.ಪಿ. ಕಚೇರಿ ಬಳಿಯಲ್ಲೇ ಒಂದು ಗಂಟೆಗಳ ‘ಟ್ರಾಫಿಕ್ ಜಾಂ' ಆಗಿತ್ತು. ಹೊಟೇಲ್ನ ಭದ್ರತಾ ಸಿಬ್ಬಂದಿ ಎಲ್ಲರಿಂದಲೂ ಬೈಗುಳ ಕೇಳುತ್ತಾ, ನಿಭಾಯಿಸಲು ಹರಸಾಹಸ ಪಡುತ್ತಿದ್ದರು.
-ಸಂತೋಷ್.