ನಾಪೆÇೀಕ್ಲು, ಡಿ. 14: ಕೊಡಗಿನ ಕುಲದೇವ, ಮಳೆ ದೇವ, ಬೊಳೆ ದೇವ ಎಂದು ಖ್ಯಾತಿ ಪಡೆದ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಹುತ್ತರಿ ಹಬ್ಬವನ್ನು ಸಂಪ್ರದಾಯದಂತೆ ವಿಜೃಂಭಣೆಯಿಂದ ಆಚರಿಸಲಾಯಿತು.

ಅಮ್ಮಂಗೇರಿಯ ಹತ್ತು ಕುಟುಂಬದ ಸದಸ್ಯರು ಹಿಂದಿನಿಂದ ನಡೆದು ಬಂದ ಪದ್ಧತಿಯಂತೆ ದುಡಿಕೊಟ್ಟ್ ಪಾಟ್, ತಳಿಯತಕ್ಕಿ ಬೊಳಕ್‍ನೊಂದಿಗೆ ಪಾಲ್ಗೊಂಡಿದ್ದರು. ಪೆÇಂಗೇರ ಅಪ್ಪಣ್ಣ ಅವರ ಭತ್ತದ ಗದ್ದೆಯಲ್ಲಿ ಇಗ್ಗುತ್ತಪ್ಪ ದೇವರಿಗೆ ಧಾನ್ಯ ಲಕ್ಷ್ಮಿಯನ್ನು ಸಮರ್ಪಿಸುವ ಸಲುವಾಗಿ ಭತ್ತದ ಕದಿರನ್ನು ಅಂಬಲ ವಾಸಿ ಎನ್.ಜಿ.ಸುಬ್ರಮಣಿ ಕುಯ್ದ ನಂತರ ಪೆÇಲಿ ಪೆÇಲಿ ದೇವ ಎಂಬ ಘೋಷಣೆಯೊಂದಿಗೆ ದೇವಳಕ್ಕೆ ತರಲಾಯಿತು. ನಂತರ ದೇವಳದಲ್ಲಿ ಧಾನ್ಯ ಲಕ್ಷ್ಮಿಗೆ ಪೂಜೆ ನೆರವೇರಿಸಿ, ಕದಿರು ವಿತರಿಸಿ, ಪ್ರಸಾದ ವಿನಿಯೋಗ ನಡೆಯಿತು.

ಈ ಸಂದರ್ಭದಲ್ಲಿ ದೇವಳಕ್ಕೆ ಸಂಬಂಧಿಸಿದ ತಕ್ಕ ಮುಖ್ಯಸ್ಥರು, ಗ್ರಾಮಸ್ಥರು, ಭಕ್ತ ವೃಂದ, ಪ್ರಧಾನ ಅರ್ಚಕರಾದ ಕುಶ ಭಟ್, ಲವ ಭಟ್, ಸಿಬ್ಬಂದಿ ಇದ್ದರು.