ಮಡಿಕೇರಿ, ಆ. 10: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಾಹನ ಸಂಖ್ಯೆ ಕೆಎ-19 ಎಫ್-2987 ವಾಹನದಲ್ಲಿ ಪ್ರಯಾಣಿಸುತ್ತಿದ್ದ ಅನಿಲಾವತಿ ಎಂಬವರು ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ವಾರಸುದಾರ ಸಹೋದರಿ ಸೋಮವಾರಪೇಟೆ ತಾಲೂಕು, ಬಸವನಹಳ್ಳಿ ಗ್ರಾಮದ ಪಿ.ಜಿ. ಭಾಗ್ಯವತಿ ಅವರಿಗೆ ಅಪಘಾತ ಪರಿಹಾರ ನಿಧಿಯಿಂದ ರೂ. 2.50 ಲಕ್ಷ ಚೆಕ್ಕನ್ನು ನಿಗಮದ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ್ ಎಲ್. ಶಿರಾಲಿ ಅವರು ಹಸ್ತಾಂತರಿಸಿದರು.
ಈ ಸಂದರ್ಭ ಉಪಮುಖ್ಯ ಭದ್ರತಾ ಮತ್ತು ಜಾಗ್ರತಾಧಿಕಾರಿ ಎಸ್.ಎಸ್. ಭಾರತಿ, ಪಿ.ಜಿ. ಭಾಗ್ಯವತಿ ಅವರ ಪತಿ ಪಿ.ಪಿ. ಗಣೇಶ್, ಲೆಕ್ಕಾಧಿಕಾರಿ (ಪ್ರಬಾರ) ತುಕಾರಾಮ್, ಸಹಾಯಕ ಸಂಚಾರ ವ್ಯವಸ್ಥಾಪಕ ಆರ್. ಮೂರ್ತಿ, ಕಾನೂನು ಅಧಿಕಾರಿ ಸಹನಾ ಭಟ್ ಇದ್ದರು.