ಶನಿವಾರಸಂತೆ, ಡಿ. 4: ಕೊಡ್ಲಿಪೇಟೆ ಸಮೀಪದ ಖ್ಯಾತೆ ಗ್ರಾಮದ ಮೂಲಕ ಲಾರಿ (ಕೆಎ 12- 9005) ಮತ್ತು (ಕೆಎ 13, ಎ-4174)ಯಲ್ಲಿ ಹಾಸನಕ್ಕೆ ನಿಯಮ ಉಲ್ಲಂಘನೆ ಮಾಡಿ ಮರಳು ಸಾಗಾಟ ಮಾಡುತ್ತಿದ್ದಾಗ ಶನಿವಾರಸಂತೆ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಹಾಗೂ ಸಿಬ್ಬಂದಿಗಳು ಪತ್ತೆ ಹಚ್ಚಿ ಕ್ರಮ ಕೈಗೊಂಡಿದ್ದಾರೆ.
ಎರಡು ಲಾರಿಗಳಲ್ಲಿ ರಾತ್ರಿ ಪರವಾನಿಗೆ ನಿಯಮ ಉಲ್ಲಂಘನೆ ಮಾಡಿ ಮರಳು ಸಾಗಾಟ ಮಾಡುತ್ತಿದ್ದಾಗ ಪತ್ತೆ ಹಚ್ಚಿದ ಪೊಲೀಸರು ಲಾರಿಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿಗಳು ಪರಿಶೀಲನೆ ನಡೆಸಿ ಎರಡು ಲಾರಿಗಳಿಗೆ ತಲಾ ರೂ. 25 ಸಾವಿರ ರೂಪಾಯಿಗಳಂತೆ ದಂಡ ವಿಧಿಸಿದ್ದಾರೆ. ಲಾರಿ ಚಾಲಕರುಗಳಾದ ಹೊಳೆನರಸಿಪುರ ತಾಲೂಕಿನ ಮೂಡಲಗುಪ್ಪೆಯ ದೀಪಕ್ ಹಾಗೂ ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆಯ ಕೆ.ಎನ್. ಚಂದ್ರು ದಂಡ ಪಾವತಿಸಿ ಲಾರಿ ಹಾಗೂ ಮರಳನ್ನು ಬಿಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ, ಸಿಬ್ಬಂದಿಗಳಾದ ಸಂತೋಷ್ಕುಮಾರ್, ವಿವೇಕ್, ವಿಶ್ವನಾಥ್, ಪ್ರದೀಪ್, ಲೋಕೇಶ್ ಪಾಲ್ಗೊಂಡಿದ್ದರು.