ಮಡಿಕೇರಿ, ಆ. 9: ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ತಿಂಗಳು 25 ರವರೆಗೆ ಪಡಿತರ ಪದಾರ್ಥ ವಿತರಣಾ ಕಾರ್ಯ ಮತ್ತು ಸೀಮೆಎಣ್ಣೆಯ ವಿತರಣಾ ಕಾರ್ಯ ನಡೆಯುತ್ತಿದೆ. ಪಡಿತರ ಚೀಟಿದಾರರು ಪೋಟೋ ಬಯೋ ಸೆಂಟರ್‍ಗಳಲ್ಲಿ ನೂಕುನುಗ್ಗಲು ಗಲಾಟೆ ಮಾಡಿಕೊಂಡು ಕೂಪನ್ ಪಡೆಯುವ ಪ್ರಮೇಯ ಇರುವದಿಲ್ಲ. ತಿಂಗಳ ದಿನಾಂಕ 25 ರವರೆಗೆ ಸಮಯಾವಕಾಶ ಇರುವದರಿಂದ ನಿಧಾನವಾಗಿ 25ರ ಒಳಗೆ ತಮ್ಮ ಆಹಾರ ಪದಾರ್ಥ ಮತ್ತು ಸೀಮೆ ಎಣ್ಣೆಯ ಕೂಪನ್ ಪಡೆದು ನ್ಯಾಯಬೆಲೆ ಅಂಗಡಿಯಲ್ಲಿ ಪಡೆಯಬಹುದು.

ನ್ಯಾಯಬೆಲೆ ಅಂಗಡಿವಾರು ಪಡಿತರ ಚೀಟಿದಾರರು ಕೂಪನ್ ಪಡೆಯುವ ಬಯೋಸೆಂಟರ್‍ಗಳ ವಿವರ ಇಂತಿದೆ:-ಕೆ.ಎಫ್.ಸಿ. ಎಸ್.ಸಿ-1, ನ್ಯಾಯಬೆಲೆ ಅಂಗಡಿ, ಹೊಸ ಬಡಾವಣೆ, ಮಡಿಕೇರಿ, ಕೆ.ಎಫ್.ಸಿ. ಎಸ್.ಸಿ-3 ಮತ್ತು 4 ನ್ಯಾಯಬೆಲೆ ಅಂಗಡಿ ಕೆ.ಎಸ್.ಆರ್. ಟಿ.ಸಿ. ಡಿಪೋ ಹತ್ತಿರ, ಮಡಿಕೇರಿ, ಕೃಷ್ಣ ನ್ಯಾಯಬೆಲೆ ಅಂಗಡಿ, ದೇಚೂರು, ಜನತಾ ಬಜಾರ್-1 ನ್ಯಾಯಬೆಲೆ ಅಂಗಡಿ, ಕೊಡವ ಸಮಾಜದ ಕಟ್ಟಡದ ಹತ್ತಿರ ಈ ನ್ಯಾಯಬೆಲೆ ಅಂಗಡಿಗಳಿಗೆ ಕೂಪನ್ ಪಡೆದುಕೊಳ್ಳಬೇಕಾದ ಫೋಟೋ ಬಯೋ ಸೆಂಟರ್‍ನ ವಿಳಾಸ ಸುರಕ್ಷ ಸೆಂಟರ್, ಕವನ್ ಮೊಬೈಲ್ ಶಾಪ್ ಹತ್ತಿರ, ನಗರಸಭೆ ಆವರಣ, ಮಡಿಕೇರಿ.

ಜನತಾ ಬಜಾರ್-3 ನ್ಯಾಯಬೆಲೆ ಅಂಗಡಿ, ಕಾನ್ವೆಂಟ್ ಜಂಕ್ಷನ್ ಹತ್ತಿರ, ಕೆ.ಎಫ್.ಸಿ. ಎಸ್.ಸಿ.-2 ನ್ಯಾಯಬೆಲೆ ಅಂಗಡಿ, ಗಣಪತಿ ಬೀದಿ, ಮಡಿಕೇರಿ, ಮುಸ್ಲಿಂ ನ್ಯಾಯಬೆಲೆ ಅಂಗಡಿ, ಮಹದೇವ ಪೇಟೆ, ಮಡಿಕೇರಿ ಹಾಗೂ ಕಾವೇರಿ ನ್ಯಾಯಬೆಲೆ ಅಂಗಡಿ, ಎ.ವಿ. ಶಾಲೆಯ ಹತ್ತಿರ ಮಡಿಕೇರಿ ಈ ನ್ಯಾಯಬೆಲೆ ಅಂಗಡಿಗಳಿಗೆ ಕೂಪನ್ ಪಡೆದುಕೊಳ್ಳಬೇಕಾದ ಫೋಟೋ ಬಯೋಸೆಂಟರ್‍ನ ವಿಳಾಸ ವಿನಾಯಕ ಎಂಟರ್ ಪ್ರೈಸಸ್, ಹಲೀಮ ಕಾಂಪ್ಲೆಕ್ಸ್, ಮಹದೇವ ಪೇಟೆ, ಮಡಿಕೇರಿ, ಇಲ್ಲಿ ಕೂಪನ್ ಪಡೆದುಕೊಳ್ಳಬಹುದು. ಈ ಬಯೋಸೆಂಟರ್‍ಗಳಿಂದ ಕೂಪನ್ ಪಡೆದು ಆಹಾರ ಧಾನ್ಯ ಮತ್ತು ಸೀಮೆಎಣ್ಣೆಯನ್ನು ಪಡೆದುಕೊಂಡು ಇಲಾಖೆಯೊಂದಿಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಕೋರಿದೆ. ಸಮಸ್ಯೆಗಳಿದ್ದಲ್ಲಿ 08272-229457 ಸಂಖ್ಯೆಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಚಂದ್ರಕಾಂತ ನಾಯಕ್ ತಿಳಿಸಿದ್ದಾರೆ.