ಮಡಿಕೇರಿ, ಡಿ. 21: ಕೇಂದ್ರ ಸರಕಾರ ನ. 8 ರಂದು ರೂ. 500 ಹಾಗೂ 1000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಅಮಾನ್ಯಗೊಳಿಸಿದ ನಂತರ ಉಂಟಾದ ಅನುಕೂಲ ಹಾಗೂ ಅನಾನುಕೂಲಗಳ ಬಗ್ಗೆ ಕೊಡಗು ಜಿಲ್ಲಾ ಯುವ ಒಕ್ಕೂಟ ಅಭಿಪ್ರಾಯಗಳನ್ನು ಆಹ್ವಾನಿಸಿದೆ.

ಪತ್ರಿಕಾ ಹೇಳಿಕೆ ನೀಡಿರುವ ಒಕ್ಕೂಟದ ಜಿಲ್ಲಾಧ್ಯಕ್ಷ ಮಂಡುವಂಡ ಜೋಯಪ್ಪ ಹಾಗೂ ಕಾರ್ಯದರ್ಶಿ ಪಿ.ಪಿ. ಸುಕುಮಾರ್ ಅಭಿಪ್ರಾಯಗಳನ್ನು ಮೂರು ಪುಟ ಮೀರದಂತೆ ಜನವರಿ 2 ರೊಳಗೆ ಒಕ್ಕೂಟದ ಕಚೇರಿಗೆ ಕಳುಹಿಸಿ ಕೊಡುವಂತೆ ತಿಳಿಸಿದ್ದಾರೆ.

“ನೋಟು ಅಮಾನ್ಯದಿಂದ ಉಂಟಾಗಿರುವ ಅನುಕೂಲ ಹಾಗೂ ಅನಾನುಕೂಲ” ವಿಷಯದ ಕುರಿತು ಅಭಿಪ್ರಾಯವನ್ನು ತಿಳಿಸಬೇಕಾಗಿದ್ದು, ಆಯ್ಕೆಯಾದ ಬರಹಕ್ಕೆ ಸೂಕ್ತ ಬಹುಮಾನ ನೀಡಲಾಗುವದೆಂದು ಅವರು ಹೇಳಿದ್ದಾರೆ. 35 ವರ್ಷದೊಳಗಿನ ಯುವಕ-ಯುವತಿಯರು ಹಾಗೂ 35 ವರ್ಷ ಮೇಲ್ಪಟ್ಟ ವಯೋಮಿತಿಯವರು ಕೂಡ ಅಭಿಪ್ರಾಯಗಳನ್ನು ಈ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ. ಅಧ್ಯಕ್ಷರು-ಕಾರ್ಯದರ್ಶಿ, ಕೊಡಗು ಜಿಲ್ಲಾ ಯುವ ಒಕ್ಕೂಟ, ಗೃಹ ನಿರ್ಮಾಣ ಸಹಕಾರ ಸಂಘದ ಕಟ್ಟಡ, ನೆಹರೂ ಯುವ ಕೇಂದ್ರ, ಮಡಿಕೇರಿ. ಹೆಚ್ಚಿನ ಮಾಹಿತಿಗೆ ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು. 9901316315, 9481213920