ಮಡಿಕೇರಿ, ಅ. 17: ಕೇಂದ್ರ ಸರ್ಕಾರ ಜನ ಸಾಮಾನ್ಯರಿಗಾಗಿ ಜಾರಿಗೆ ತಂದಿರುವÀ ಮಹತ್ವಾಕಾಂಕ್ಷೆಯ ಯೋಜನೆಗಳಾದ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯ ಅಪಘಾತ ಮರಣ ವಿಮೆ ಹಾಗೂ ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಯ ಜೀವ ವಿಮಾ ಯೋಜನೆಯಿಂದ ಲಕ್ಷಾಂತರ ಬಡ ಕುಟುಂಬಗಳಿಗೆ ಧನ ಸಹಾಯ ಲಭಿಸಿದ್ದು, ಈ ಯೋಜನೆಗಳ ಲಾಭವನ್ನು ಕೊಡಗಿನ ಜನರು ಕೂಡ ಪಡೆದುಕೊಳ್ಳುವಂತೆ ಸ್ವಾಮಿ ವಿವೇಕಾನಂದ ಜನ ಸೇವಾ ಸಂಘದ ಅಧ್ಯಕ್ಷ ಕೆ.ಎಸ್. ಗಣೇಶ್ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಅಪಘಾತದಿಂದ ಅಂಗವಿಕಲತೆ ಅಥವಾ ಮರಣ ಹೊಂದಿದರೆ, ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿರು ವವರಿಗೆ ಅಥವಾ ಖಾಯಿಲೆಯಿಂದ ಮರಣ ಹೊಂದಿದವರ ಕುಟುಂಬ ವರ್ಗಕ್ಕೆ ಕೇವಲ 15 ದಿನಗಳಲ್ಲಿ ಕೇಂದ್ರದ ಯೋಜನೆ ಪ್ರಕಾರವಾಗಿ ವಿಮಾ ಹಣ ಪಾವತಿಯಾಗುತ್ತಿದೆ ಎಂದು ತಿಳಿಸಿದ್ದಾರೆ.

ಮಾದಾಪುರದ ಶೇಖರ್ ಕುಂಬೂರ್ ಎಂಬವರು ಮಡಿಕೇರಿಯ ವಿಜಯ ಬ್ಯಾಂಕ್‍ನಲ್ಲಿ ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಯ ಜೀವ ವಿಮಾ ಖಾತೆಯನ್ನು ಹೊಂದಿದ್ದರು. ಅವರು ಇದೇ ಜು.30 ರಂದು ಅನಾರೋಗ್ಯ ದಿಂದ ಮರಣ ಹೊಂದಿದ್ದು, ಅವರ ಪತ್ನಿಗೆ ಸೆ. 2 ರಂದು ರೂ. 2 ಲಕ್ಷದಷ್ಟು ವಿಮಾ ಸೌಲಭ್ಯದ ಹಣ ಸಿಕ್ಕಿದೆ. ಅರ್ಜಿ ಪ್ರಕ್ರಿಯೆ ನಡೆದ ಕೇವಲ 15 ದಿನಗಳಲ್ಲಿ ಫಲಾನುಭವಿಯ ಕುಟುಂಬಕ್ಕೆ ಈ ಹಣ ದೊರೆತ್ತಿದ್ದು, ಪ್ರತಿಯೊಬ್ಬರು ವಿಮಾ ಖಾತೆಯನ್ನು ಹೊಂದುವ ಮೂಲಕ ಕೇಂದ್ರ ಸರಕಾರದ ಯೋಜನೆಯ ಲಾಭ ಪಡೆದುಕೊಳ್ಳಬೇಕೆಂದು ಗಣೇಶ್ ಹೇಳಿದ್ದಾರೆ.

ಬ್ಯಾಂಕ್ ಖಾತೆಯಲ್ಲಿ ಪ್ರತಿ ವರ್ಷ ವಿಮಾ ಹಣ ಜಮೆ ಮಾಡಬೇಕು. ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಅಪಘಾತ ಮರಣ ವಿಮಾ ಸೌಲಭ್ಯವನ್ನು ಪಡೆಯಲು ವಾರ್ಷಿಕ ರೂ. 12 ಅನ್ನು ಪಾವತಿಸಿದಲ್ಲಿ 18 ರಿಂದ 70 ವರ್ಷ ವಯಸ್ಸಿನವರಿಗೆ ಈ ಸೌಲಭ್ಯ ಪಡೆದುಕೊಳ್ಳಬಹುದು.

ಈ ಯೋಜನೆಯಲ್ಲಿ ಅಪಘಾತ ದಿಂದ ಮರಣ ಹೊಂದಿದ್ದರೆ ಅಥವಾ ಸಂಪೂರ್ಣ ಅಂಗಹೀನ ರಾದರೆ ರೂ.2 ಲಕ್ಷ, ಅಪಘಾತದಿಂದ ಭಾಗಶಃ ಅಂಗಹೀನರಾದರೆ ರೂ.1 ಲಕ್ಷ ಧನ ಸಹಾಯ ಸಿಗಲಿದೆ.

ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಜೀವ ವಿಮೆ ಸೌಲಭ್ಯವನ್ನು ಪಡೆಯಲು ವಾರ್ಷಿಕ ರೂ. 330ನ್ನು 18 ರಿಂದ 50 ವರ್ಷ ವಯಸ್ಸಿನವರು ಪ್ರತಿ ವರ್ಷ ವಿಮಾ ಕಂತನ್ನು ಪಾವತಿಸಬೇಕು. ಯಾವದೇ ಕಾರಣದಿಂದ ಮರಣ ಹೊಂದಿದರೆ ಆ ವ್ಯಕ್ತಿಯ ವಾರಸುದಾರರಿಗೆ ರೂ. 2 ಲಕ್ಷ ದೊರೆಯುತ್ತದೆ. ಇದರ ಸದುಪಯೋಗ ಪಡೆಯಲು ಪ್ರತಿ ವರ್ಷ ರೂ. 330 ವಿಮಾ ಕಂತು ಪಾವತಿಸಬೇಕು. ಅರ್ಧದಲ್ಲಿ ನಿಲ್ಲಿಸಿದರೆ ಇದರ ಸೌಲಭ್ಯವು ದೊರೆಯುವದಿಲ್ಲ. ಈಗಾಗಲೇ ಹೆಚ್ಚಿನ ಜನರು ಜನಧನ ಖಾತೆಯನ್ನು ತೆರೆದಿದ್ದಾರೆಯಾದರೂ ಖಾತೆಯಲ್ಲಿ ವಿಮಾ ಹಣವನ್ನು ಜಮಾ ಮಾಡುತ್ತಿಲ್ಲ. ಇದರಿಂದ ಸೌಲಭ್ಯ ವಂಚಿತರಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಗಣೇಶ್ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರದ ಈ ಮಹತ್ವಾಕಾಂಕ್ಷೆಯ ಯೋಜನೆಯ ಬಗ್ಗೆ ಸಂಘದ ವತಿಯಿಂದ ಗ್ರಾಮೀಣ ಭಾಗದಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.