ಕೂಡಿಗೆ, ನ. 7: ಕೂಡಿಗೆ ಆಟೋ ಚಾಲಕರು ಮತ್ತು ಮಾಲೀಕರ ಸಂಘ, ಗೂಡ್ಸ್ ಚಾಲಕರ ಮತ್ತು ಮಾಲೀಕರ ಸಂಘದ ಸಂಯುಕ್ತಾಶ್ರಯದಲ್ಲಿ 2ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಇಂದು ಕೂಡಿಗೆ ಸರ್ಕಲ್ನ ಗಣಪತಿ ಪೆಂಡಾಲ್ ಆವರಣದಲ್ಲಿ ಆಚರಿಸಲಾಯಿತು.
ಕಣಿವೆ ಸಾಹಿತಿ ಭಾರದ್ವಾಜ್ ದ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡದ ನೆಲ ಜಲ ಉಳಿದರೆ ಭಾಷೆ ಉಳಿದಂತೆ. ಭಾಷೆಯ ಉಳಿವಿಗೆ ಎಲ್ಲಾ ಸಂಘಟನೆಗಳು ತನ್ನದೇ ಆದ ಕಾರ್ಯಚಟುವಟಿಕೆಗಳನ್ನು ನಡೆಸುತ್ತ ಬಂದಲ್ಲಿ ನಾಡು ನುಡಿಯ ರಕ್ಷಣೆಯು ಆಗುತ್ತದೆ. ಪ್ರತಿಯೊಬ್ಬರು ಭಾಷಾಭಿಮಾನವನ್ನು ಬೆಳೆಸಿಕೊಂಡು ಕನ್ನಡಕ್ಕೆ ಹೆಚ್ಚು ಒತ್ತುಕೊಡುವ ದೃಷ್ಟಿಯಲ್ಲಿ ಆಡಳಿತದಲ್ಲಿಯೂ ಕನ್ನಡ ಬಳಕೆ ನಿಖರವಾಗಿ ಸಾಗಬೇಕು ಎಂದರು.
ನಂತರ ನಡೆದ ಮೆರವಣಿಗೆ ಉದ್ಘಾಟನೆಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸ್ಥಳೀಯ ಜ್ಞಾನೋದಯ ಶಾಲೆಯ ವ್ಯವಸ್ಥಾಪಕ ಹೆಚ್.ಎಸ್. ಮುದ್ದಪ್ಪ ನೆರವೇರಿಸಿ, ನಂತರ ಮಾತನಾಡಿ, ನಾಡಿನ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕನ್ನಡಿಗರ ಮೇಲಿದೆ ಎಂದರು.
ಈ ಸಂದರ್ಭ ಅಲಂಕೃತವಾದ ಆಟೋಗಳಲ್ಲಿ ಸ್ಥಳೀಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ವ್ಯಕ್ತಿಗಳ ಭಾವಚಿತ್ರಗಳನ್ನು ಇರಿಸಿ ಕೂಡಿಗೆ ಸರ್ಕಲ್ನಿಂದ ಕೂಡುಮಂಗಳೂರು ಡೈರಿ ಸರ್ಕಲ್ವರೆಗೆ ಮೆರವಣಿಗೆ ಸಾಗಿದರು.
ಗೂಡ್ಸ್ ಆಟೋ ಚಾಲಕರು ತಮ್ಮ ಆಟೋಗಳಿಗೆ ವಿವಿಧ ರೀತಿಯ ರಾಜ್ಯೋತ್ಸವವನ್ನು ಬಿಂಬಿಸುವ ಭಂಗಿಯಲ್ಲಿ ಅಲಂಕರಿಸಿದ್ದು ಆಕರ್ಷಣೀಯವಾಗಿತ್ತು. ನಂತರ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕøತಿಕ ಸ್ಪರ್ಧಾ ಕಾರ್ಯಕ್ರಮಗಳು ನಡೆದವು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಟೋ ಚಾಲಕರ ಸಂಘದ ಅಧ್ಯಕ್ಷ ಎಸ್.ಪಿ.ನಾಗೇಶ್ ವಹಿಸಿದ್ದರು.
ಈ ಸಂದರ್ಭ ಜಿಲ್ಲಾ ಐಎನ್ಟಿಯೂಸಿ ಅಧ್ಯಕ್ಷ ಟಿ.ಪಿ. ಹಮೀದ್, ಗೂಡ್ಸ್ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮಹಮ್ಮದ್, ಕನ್ನಡ ರಾಜ್ಯೋತ್ಸವ ಸಮಿತಿಯ ಅಧ್ಯಕ್ಷ ಪ್ರಸಾದ್, ಉಪಾಧ್ಯಕ್ಷ ಬಿ.ಎಸ್. ಪ್ರದೀಪ್, ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರವಿಚಂದ್ರ, ಕೂಡಿಗೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಪ್ರಕಾಶ್, ಐಗೂರು ಗ್ರಾ.ಪಂ ಮಾಜಿ ಅಧ್ಯಕ್ಷ ಸುಬ್ರಮಣಿ, ಸಮಿತಿಯ ಕಾರ್ಯದರ್ಶಿ ಎಸ್.ಸಿ. ಪ್ರವೀಣ್, ಖಜಾಂಚಿ ವೀರಭದ್ರಶೆಟ್ಟಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಸ್ಥಿತರಿದ್ದರು. ನಂತರ ಸೋಮಶೇಖರ್ ಕುಹು ಕುಹು ಮೆಲೋಡಿಸ್ ಇವರಿಂದ ಜನಪದ ಗಾಯನ ಕಾರ್ಯಕ್ರಮ ನಡೆಯಿತು.