ಶ್ರೀಮಂಗಲ, ಆ. 19: ಕೊಡಗು ಜಿಲ್ಲೆಯ ಸರಕಾರಿ ಆರೊಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರುಗಳು ಹಿಂದೇಟು ಹಾಕುತ್ತಿದ್ದಾರೆ. ಖಾಲಿ ಇರುವ ವೈದ್ಯರ ಹುದ್ದೆಗಳನ್ನು ತುಂಬಲು ನಡೆಸಿದ ಕೌನ್ಸಲಿಂಗ್‍ನಲ್ಲಿ ವೈದ್ಯರುಗಳು ಹಾಜರಾಗಿರುವದು ತೀರಾ ಕಡಿಮೆ. ತಾ 26 ಕ್ಕೆ ಆರೋಗ್ಯ ಸಚಿವರು ಜಿಲ್ಲೆಗೆ ಅಗಮಿಸಲಿದ್ದು, ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಪ್ರಯತ್ನಿಸಲಾಗುವದು. ಅಗತ್ಯವಾದರೆ ನಿವೃತ್ತರಾಗಿರುವ ವೈದ್ಯರುಗಳನ್ನು ಸೇವೆಗೆ ತೆಗೆದುಕೊಳ್ಳಲು ಮೌಖಿಕವಾಗಿ ಸರಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಹೇಳಿದರು.
ಹುದಿಕೇರಿಯಲ್ಲಿ ನೂತನವಾಗಿ 112 ಲಕ್ಷದಲ್ಲಿ ನಿರ್ಮಾಣವಾದ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿರು. ಡಿ.ಹೆಚ್.ಓ ಶ್ರೀರಂಗಪ್ಪ ಮಾತನಾಡಿದರು.
ಈ ಸಂದರ್ಭ ಎಂ.ಎಲ್.ಸಿ. ವೀಣಾ ಅಚ್ಚಯ್ಯ, ಎ.ಡಿ.ಸಿ. ಸತೀಶ್, ಜಿ.ಪಂ. ಸದಸ್ಯೆ ಶ್ರೀಜಾ ಅಚ್ಯುತನ್, ಗ್ರಾ.ಪಂ. ಅಧ್ಯಕ್ಷೆ ರೇಖಾ ಪೊನ್ನಪ್ಪ, ಟಿ.ಹೆಚ್.ಓ. ಡಾ ಯತಿರಾಜ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿದ್ದಾಟಂಡ ಟಿ. ಪ್ರದೀಪ್, ಗ್ರಾ.ಪಂ. ಸದಸ್ಯರಾದ ಮೀದೇರಿರ ನವೀನ್, ಚಂಗುಲಂಡ ಸೂರಜ್, ಸ್ಥಳೀಯ ಪ್ರಮುಖ ಚಕ್ಕೇರ ವಾಸು ಕುಟ್ಟಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ, ಮಾಜಿ ಜಿ.ಪಂ. ಸದಸ್ಯ ಎಂ.ಎಸ್. ಕುಶಾಲಪ್ಪ ಮತ್ತಿತರರು ಹಾಜರಿದ್ದರು.