ಸುಂಟಿಕೊಪ್ಪ, ಮೇ 11: ಮಧ್ಯ ರಾತ್ರಿಯಲ್ಲಿ ಅತಿ ವೇಗವಾಗಿ ಚಾಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಾಜ್ಯ ಹೆದ್ದಾರಿ ಮನೆಯ ಮುಂದೆ ಶೆಡ್‍ನಲ್ಲಿ ನಿಲ್ಲಿಸಿದ್ದ ಮತ್ತೊಂದು ಕಾರಿಗೆ ತಡೆಗೋಡೆಯನ್ನು ಭೇದಿಸಿ ಡಿಕ್ಕಿಯಾದ ಪರಿಣಾಮ ಕಾರು ತೀವ್ರಜಖಂ ಗೊಂಡಿದ್ದು ಓರ್ವನ ಕಾಲು ಮುರಿತಕ್ಕೊಳಗಾದ ಘಟನೆ ನಡೆದಿದೆ.
ಕುಶಾಲನಗರ ಕಡೆಯಿಂದ ಮಾರುತಿ ಕಾರು (ಕೆಎಲ್ 59 ಡಿ 1166) ಮಡಿಕೇರಿ ಕಡೆಗೆ ಮಧ್ಯರಾತ್ರಿ 1.15 ಗಂಟೆಗೆ ಚಾಲಿಸುತ್ತಿದ್ದಾಗ 7 ನೇ ಹೊಸಕೋಟೆ ರಾಜ್ಯ ಹೆದ್ದಾರಿ ಬಳಿ ಚಾಲಕನ ನಿಯಂತ್ರಣ ತಪ್ಪಿದ್ದು, 7ನೇ ಹೊಸಕೋಟೆ ನಿವಾಸಿ ಕೆ.ಕೆ. ರಾಜೇಂದ್ರ ಅವರ ಮನೆಯ ತಡೆಗೋಡೆಗೆ ಮಗುಚಿಕೊಂಡ ವಾಹನವು ಮನೆಯ ಮುಂಭಾಗಕ್ಕಾಗಿ ಬದಿಯ ಶೆಡ್‍ನಲ್ಲಿ ನಿಲ್ಲಿಸಿದ್ದ ಮಾರುತಿ ಸ್ವಿಫ್ಟ್ ಕಾರಿಗೆ ಮಾರುತಿ ಕಾರು ಅಪ್ಪಳಿಸಿದೆ. ಪರಿಣಾಮ ಎರಡು ವಾಹನಗಳು ನಜ್ಜುಗುಜ್ಜಾಗಿದೆ.
ಕಾರಿನಲ್ಲಿ 4 ಮಂದಿ ಸಂಚರಿಸುತ್ತಿದ್ದು, ಅವಘಡದಿಂದ ಓರ್ವ ಕಾಲು ಮುರಿತಕ್ಕ್ಕೊಳಗಾಗಿದ್ದು, ಗಾಡ ನಿದ್ರಾವಸ್ಥೆಯಲ್ಲಿದ್ದ ರಾಜೇಂದ್ರ ಅವರ ಮನೆ ಹಾಗೂ ಮನೆಯ ಮಂದಿ ಅಪಾಯದಿಂದ ಪಾರಾಗಿದ್ದಾರೆ.