ಪದ್ಮಿನಿ ಪೊನ್ನಪ್ಪಗೂ ಅಧ್ಯಕ್ಷ ಸ್ಥಾನ ಬೆಂಗಳೂರು, ಅ. 27: ರಾಜ್ಯ ಸರ್ಕಾರ ಇಂದು ವಿವಿಧ ನಿಗಮ - ಮಂಡಳಿಗಳಿಗೆ ಅಧ್ಯಕ್ಷರುಗಳನ್ನು ನೇಮಕ ಮಾಡಿದೆ. ಕಾಂಗ್ರೆಸಿನ 20 ಶಾಸಕರಿಗೆ, 20 ಕಾರ್ಯಕರ್ತರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಕೊಡಗು ಮೂಲದ ಮಾಂಗೇರ ಪದ್ಮಿನಿ ಪೊನ್ನಪ್ಪ ಅವರಿಗೂ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಆದರೆ ಯಾವ ನಿಗಮ-ಮಂಡಳಿ ಎಂಬದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಮೂಲತಃ ಕೊಡಗಿನ ತಿತಿಮತಿಯವರಾಗಿರುವ ಪದ್ಮಿನಿ ಪೊನ್ನಪ್ಪ ರಾಜ್ಯ ಕಾಂಗ್ರೆಸ್‍ನ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ.