ಮಡಿಕೇರಿ, ಸೆ. 23: ಮಡಿಕೇರಿ ಹಿಂದೂ ಮಲೆಯಾಳಿ ಸಂಘದ ವತಿಯಿಂದ ತಾ. 25ರಂದು ಓಣಂ ಹಬ್ಬ ಸಂಭ್ರಮಾಚರಣೆ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 10.30 ಗಂಟೆಗೆ ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದಿಂದ ಚಂಡೆ ಮೇಳದೊಂದಿಗೆ ಸಾಂಪ್ರದಾಯಿಕ ಮೆರವಣಿಗೆ ನಡೆಯಲಿದೆ. ನಂತರ ಬ್ರಾಹ್ಮಣರ ಕಲ್ಯಾಣಮಂಟಪದಲ್ಲಿ ಸಮಾರಂಭ, ಓಣಂ ಸದ್ಯ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಘದ ಅಧ್ಯಕ್ಷ ಕೆ.ಎಸ್. ರಮೇಶ್ ತಿಳಿಸಿದ್ದಾರೆ.