ಮೂರ್ನಾಡು-ಹೊದ್ದೂರು, ಡಿ. 20: ಮೂರ್ನಾಡಿನ ಲಯನ್ಸ್ ಕ್ಲಬ್ ಮತ್ತು ಮಂಗಳೂರಿನ ಎ.ಬಿ.ಶೆಟ್ಟಿ ದಂತವೈದ್ಯಕೀಯ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ತಾ.22ರಂದು ಉಚಿತ ದಂತ ಮತ್ತು ವಸಡು ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವು ಮೂರ್ನಾಡಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೆಳಿಗ್ಗೆ 9ಗಂಟೆಗೆ ಆರಂಭವಾಗಲಿದೆ. ಶಿಬಿರದಲ್ಲಿ ಹಲ್ಲು ಮತ್ತು ವಸಡಿಗೆ ಸಂಬಂಧಪಟ್ಟ ಚಿಕಿತ್ಸೆ ನೀಡಲು ಮಂಗಳೂರಿನಿಂದ ತಜ್ಞ ವೈದ್ಯರ ತಂಡ ಆಗಮಿಸಲಿದೆ.ಶಿಬಿರದಲ್ಲಿ ಹಲ್ಲು ಕೀಳುವದು, ಕಟ್ಟಿಸುವದು ಸೇರಿದಂತೆ ವಿವಿಧ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಗುವದು. ಶಿಬಿರದ ಪ್ರಯೋಜನ ಪಡೆಯಲು ಬಯಸುವವರು ಅಂದು ಬೆಳಿಗ್ಗೆ 9ಗಂಟೆಗೆ ತಮ್ಮ ಹೆಸರನ್ನು ಆಸ್ಪತ್ರೆಯಲ್ಲಿ ನೋಂದಾಯಿಸಿ ಕೊಳ್ಳಬಹುದಾಗಿದೆ ಎಂದು ಶಿಬಿರದ ಆಯೋಜಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.