ಮಡಿಕೇರಿ, ಜ.20: ಕೊಯನಾಡಿನ ಜೈಹಿಂದ್ ಯುವಕ ಮಂಡಲ ಹಾಗೂ ಅಮೆಚೂರು ಕಬಡ್ಡಿ ಅಸೋಸಿಯೇಷನ್‍ನ ಸಂಯುಕ್ತಾಶ್ರಯ ದಲ್ಲಿ ಅಂತರರಾಜ್ಯ ಮಟ್ಟದ ಪುರುಷರ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾವಳಿ ತಾ.22 ರಂದು ನಡೆಯಲಿದೆ.

ಪತ್ರಿಕಾ ಹೇಳಿಕೆ ನೀಡಿರುವ ಯುವಕ ಮಂಡಲದ ಅಧ್ಯಕ್ಷ ಕೆ.ಎನ್. ರಾಘವೇಂದ್ರ 25 ತಂಡಗಳು ಪಾಲ್ಗೊಳ್ಳುತ್ತಿರುವ ಪಂದ್ಯಾವಳಿ ಕೊಯನಾಡು ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.

ಪ್ರಥಮ ಬಹುಮಾನ 22,222 ರೂ., ದ್ವಿತೀಯ 11,111 ರೂ., ತೃತೀಯ 6,666 ಹಾಗೂ ನಾಲ್ಕನೇ ಬಹುಮಾನವಾಗಿ 3,333 ರೂ. ನಗದನ್ನು ನೀಡಲಾಗುತ್ತಿದೆ.

ಮಧ್ಯಾಹ್ನ ನಡೆಯುವ ಉದ್ಘಾಟನಾ ಸಮಾರಂಭದ ಸಭೆಯನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಲಿದ್ದು, ಕ್ರೀಡಾಂಗಣವನ್ನು ವಿಧಾನ ಪರಿಷತ್ ಸದಸ್ಯೆ ವೀಣಾಅಚ್ಚಯ್ಯ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆಹಾರ ಖಾತೆ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಕಲ್ ರಮನಾಥ, ಜೈ ಹಿಂದ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಎಸ್.ಇ. ಮಹಮ್ಮದ್ ಕುಂಞ, ಸಂಚಾಲಕ ಎಸ್.ಪಿ.ಹನೀಫ, ಸಂಪಾಜೆ ಅರಣ್ಯ ವಲಯಾಧಿಕಾರಿ ಶಮಾಬಾನು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್, ಪೊಲೀಸ್ ನಿರೀಕ್ಷಕ ಡಿ.ಆರ್. ಪ್ರದೀಪ್, ಉದ್ಯಮಿಗಳಾದ ಕೊಡಿಬೈಲು ಗಣೇಶ, ಪಿ.ಕೆ.ಹರಿಪ್ರಸಾದ್, ಎಂ.ಪಿ.ವಾಸು, ಕೊಯನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸುಲೋಚನ, ಅಮೆಚೂರ್ ಕಬಡ್ಡಿ ಅಸೋಸಿಯೇಷನ್‍ನ ಅಧ್ಯಕ್ಷ ಹೆಚ್.ಎಸ್.ಉತ್ತಪ್ಪ, ಕೊಯನಾಡು ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಹಿಮಾನ್, ಶ್ರೀಮಹಾಗಣಪತಿ ದೇವಾಲಯದ ಅಧ್ಯಕ್ಷ ಉಲ್ಲಾಸ್ ಕೆನಾಜೆ ಹಾಗೂ ಮುತ್ತು ಮಾರಿಯಮ್ಮ ದೇವಾಯದ ಅಧ್ಯಕ್ಷ ಚಂದ್ರಮೋಹನ್ ಉಪಸ್ಥಿತರಿರುವರು.

ಸಮಾರೋಪ ಸಮಾರಂಭದಲ್ಲಿ ಪಯಸ್ವಿನಿ ವ್ಯವಸಾಯ ಸೇವಾ ಸಹಕಾರಿಯ ನಿರ್ದೇಶಕ ತೀರ್ಥ ಕುಮಾರ್ ಬಹುಮಾನ ವಿತರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಂಪಾಜೆ ಲಯನ್ಸ್ ಕ್ಲಬ್‍ನ ಮಾಜಿ ಅಧ್ಯಕ್ಷ ಅಪ್ಪಣ್ಣ, ಪೊಲೀಸ್ ಉಪನಿರೀಕ್ಷಕ ಶಿವಪ್ರಕಾಶ್, ಸಂಪಾಜೆ ಗ್ರಾ.ಪಂ. ಉಪಾಧ್ಯಕ್ಷ ಬಿ.ಆರ್. ಸುಂದರ್, ಮಾಜಿ ಅಧ್ಯಕ್ಷರುಗಳಾದÀ ಬಿ.ಎ. ಗಣಪತಿ, ಪಿ.ಎಲ್. ಸುರೇಶ್, ಸದಸ್ಯೆ ಕೆ.ಕೆ. ರಾಜೇಶ್ವರಿ, ಜಿಲ್ಲಾ ವಕ್ಫ್ ಸಮಿತಿ ಸದಸ್ಯ ಮೊಹಿದ್ದೀನ್ ಕುಜ್ಞ, ಅಮೆಚೂರು ಕಬಡ್ಡಿ ಅಸೋಸಿಯೇಷನ್‍ನ ಕಾರ್ಯದರ್ಶಿ ಬಿ.ಡಿ. ಕಪಿಲ್ ಕುಮಾರ್, ಸಮಾಜ ಸೇವಕ ಎಸ್.ಇ. ಅಬ್ದುಲ್ ಹಮೀದ್, ಕೊಯನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಜಗದೀಶ್, ಉದ್ಯಮಿಗಳಾದ ಸಂಪತ್‍ಕುಮಾರ್, ನಸೀರ್ ಮಾಡಶೇರಿ, ಕೆ.ಎಂ.ಶಮೀರ್, ಮನು ಕಲ್ಲುಗುಂಡಿ, ಯೋಗೇಶ್ವರ, ಜೈಹಿಂದ್ ಯುವಕ ಮಂಡಲದ ಸಲಹಾ ಸಮಿತಿ ಸದಸ್ಯರಾದ ಬಿ.ಟಿ.ಶಶಿಧರ್, ಶ್ರೀಧರ್, ಅಯ್ಯೂಬ್, ಕ್ರೀಡಾ ಕಾರ್ಯದರ್ಶಿ ಕೆ.ಡಿ.ಜ್ಞಾನಶೇಖರ್ ಹಾಗೂ ನಟ ರಾಜ್ ಸಂಪಾಜೆ ಉಪಸ್ಥಿತರಿರುವರು ಎಂದು ಕೆ.ಎನ್.ರಾಘವೇಂದ್ರ ತಿಳಿಸಿದ್ದಾರೆ.

ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮಾಜಿ ಸೈನಿಕರುಗಳಾದ ಪಿ.ಸಿ.ವೇಗೇಂದ್ರ ಕಲ್ಲಾಳ, ಕೆ.ಬಿ.ತಿಮ್ಮಯ್ಯ ಕಲ್ಲಾಳ, ಬಿ.ಸಿ.ಶಾಂತ ಭಾಸ್ಕರ್ ಹಾಗೂ ಪಿ.ಟಿ.ಪೂಣಚ್ಚ ಕಲ್ಲಾಳ ಅವರುಗಳನ್ನು ಸನ್ಮಾನಿಸಲಾಗುವದೆಂದು ಅವರು ಹೇಳಿದ್ದಾರೆ. ವಿಶೇಷ ಆಕರ್ಷಣೆಯಾಗಿ ಸಿಂಗಾರಿ ಮೇಳ ಹಾಗೂ ಸಿಡಿಮದ್ದು ಪ್ರದರ್ಶನವಿರುತ್ತದೆ.