ಗೋಣಿಕೊಪ್ಪಲು, ಸೆ. 21: ಪೊನ್ನಂಪೇಟೆ ನಾರಾಯಣ ಗುರು ಜಯಂತಿ ಹಾಗೂ ಓಣಂ ಆಚರಣೆ ಭಕ್ತಿಪೂರ್ವಕವಾಗಿ ನಡೆಯಿತು.

ನಾರಾಯಣ ಧರ್ಮ ಪರಿಪಾಲನ ಸಂಸ್ಥೆ ಪೊನ್ನಂಪೇಟೆ ಘಟಕ, ಎಸ್‍ಎನ್‍ಡಿಪಿ, ವನಿತಾ ಸಂಘ ಹಾಗೂ ಬಸವೇಶ್ವರ ಪುರುಷ ಸ್ವಸಹಾಯ ಸಂಘದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಮಕೃಷ್ಣ ಶಾರದಾಶ್ರಮದವರೆಗೆ ನಾರಾಯಣ ಗುರುಗಳ ಮೂರ್ತಿಯನ್ನು ಹೊತ್ತು ಮೆರವಣಿಗೆ ನಡೆಯಿತು.

ಬೆಳಿಗ್ಗೆ ಗುರು ಪೂಜೆ ನಡೆಸಲಾಯಿತು. ನಂತರ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಹಿಳೆಯರಿಗೆ ಹೂವಿನಿಂದ ರಂಗೋಲಿ ಸ್ಪರ್ಧೆ ನಡೆಯಿತು. ಪೂಕಳಂ ಸ್ಪರ್ಧೆಯಲ್ಲಿ ವಿಜು ಮತ್ತು ತಂಡ (ಪ್ರ), ಸುಜು ಮತ್ತು ತಂಡ (ದ್ವಿ), ಪ್ರದೀಶ್ ಮತ್ತು ಅಕ್ಷಿತಾ ತಂಡ ತೃತೀಯ ಸ್ಥಾನ ಪಡೆದುಕೊಂಡಿತು. ಈ ಸಂದರ್ಭ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ ನಡೆಯಿತು. ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಅಧ್ಯಕ್ಷ ಬೋಧಸ್ವರೂಪ ನಂದಾಜಿ ಆಶೀರ್ವಚನ ನೀಡಿದರು.

ಸಮಾರೋಪ: ಸಮಾರೋಪ ಸಮಾರಂಭದಲ್ಲಿ ಶಾಸಕ ಕೆ.ಜಿ. ಬೋಪಯ್ಯ ಪಾಲ್ಗೊಂಡು ಮಾತನಾಡಿ, ಸಂಘದ ಮೂಲಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಅವಶ್ಯಕತೆ ಇದೆ ಎಂದರು. ತಾ. ಪಂ. ಮಾಜಿ ಸದಸ್ಯ ದಯಾ ಚೆಂಗಪ್ಪ, ಜಿ. ಪಂ. ಸದಸ್ಯೆ ಶ್ರೀಜಾ ಶಾಜಿ. ಪೊನ್ನಂಪೇಟೆ ಗ್ರಾ. ಪಂ. ಅಧ್ಯಕ್ಷೆ ಮೂಕಳೇರ ಸುಮಿತ, ವಯನಾಡ್ ವಿಹೆಚ್‍ಪಿ ಕಾರ್ಯದರ್ಶಿ ಸುಕುಮಾರನ್, ಎಸ್‍ಎನ್‍ಡಿಪಿ ಪೊನ್ನಂಪೇಟೆ ಘಟಕ ಅಧ್ಯಕ್ಷ ಎಂ. ಎಂ. ದಿಲಿಪ್, ಕಾರ್ಯದರ್ಶಿ ಕೆ. ಬಿ. ವಿನು, ಸ್ಥಾಪಕ ಅಧ್ಯಕ್ಷ ಪಧ್ಮನಾಭ್ ಉಪಸ್ಥಿತರಿದ್ದರು. ಸಜಿತ ವರದಿ ವಾಚಿಸಿದರು. ಗೀತಾ ಮತ್ತು ಸುಷ್ಮಾ ನಿರೂಪಿಸಿದರು. ಸುದರ್ಶನ್ ವಂದಿಸಿದರು.