ನಾಪೋಕ್ಲು, ಜ. 29: ಗಣರಾಜ್ಯೋತ್ಸವದ ಅಂಗವಾಗಿ ನಾಪೋಕ್ಲು ಪಟ್ಟಣದಲ್ಲಿ ಗುರುವಾರ ಸೌಹಾರ್ದ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು. ಎಸ್ಕೆಎಸ್ಎಸ್ಎಫ್ ವತಿಯಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಸ್ಥಳೀಯ ಮಾರುಕಟ್ಟೆ ಬಳಿ ಸೌಹಾರ್ದ ಸಮ್ಮೇಳನ ಜರುಗಿತು. ಸಮ್ಮೇಳನದಲ್ಲಿ ಬಸವಪಟ್ಟಣದ ಸ್ವತಂತ್ರ ಬಸವಲಿಂಗ ಸ್ವಾಮೀಜಿ, ಮಂಗಳೂರಿನ ವೇದ ವಿದ್ಯಾಲಯದ ರೆವರೆಂಡ್ ಫಾದರ್ ಫೆಡ್ರಿಕ್ ಅನಿಲ್ಕುಮಾರ್, ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾಸ್ಟರ್ ಕೊಡಗು ಮುಸ್ಲಿಂ ಸಮಾಜದ ಮುಖಂಡ ಪಿಎಂ ಖಾಸಿಂ, ಕೆ.ಎಂ. ಉಸ್ಮಾನ್, ಕೆ.ಎ. ಯಾಕೂಬ್ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಸಮೀಪದ ಎಮ್ಮೆಮಾಡು ದರ್ಗಾ ಷರೀಫ್ನಲ್ಲಿ ಸೌಹಾರ್ದ ಸಂದೇಶ ಜಾಥಾಕ್ಕೆ ಚಾಲನೆ ನೀಡಲಾಯಿತು. ದರ್ಗಾ ಷರೀಫ್ನಲ್ಲಿ ಜಿಲ್ಲಾ ಸಮಸ್ತ ಖಾಝಿ ಎಂ. ಅಬ್ದುಲ್ಲಾ ಫೈಜಿ ಉಸ್ತಾದ್ ನೇತೃತ್ವದಲ್ಲಿ ಜಾಥಾಕ್ಕೆ ಚಾಲನೆ ನೀಡಲಾಯಿತು.