ನಾಪೆÇೀಕ್ಲು, ಅ. 5: ಮಹಾತ್ಮ ಗಾಂಧೀಜಿ ದೇಶಕ್ಕೆ ನೀಡಿದ ಕೊಡುಗೆ ಮತ್ತು ಅದರ ಮೌಲ್ಯವನ್ನು ಅರಿತರೆ ಮಾತ್ರ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದಂತಾಗುತ್ತದೆ ಎಂದು ನಿವೃತ್ತ ಶಿಕ್ಷಕಿ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಅಭಿಪ್ರಾಯಪಟ್ಟರು.

ಸ್ಥಳೀಯ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಲಾಗಿದ್ದ ಸನ್ಮಾನ ಮತ್ತು ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಈ ಸಂದರ್ಭ ಬೊಳ್ಳಮ್ಮ ನಾಣಯ್ಯ ಅವರನ್ನು ಸನ್ಮಾನಿಸುವದರೊಂದಿಗೆ ವರ್ಗಾವಣೆಗೊಳ್ಳುತ್ತಿರುವ ಸಂಸ್ಥೆಯ ಶಿಕ್ಷಕಿಯರಾದ ಸುಜಾತ ಮತ್ತು ಪ್ರತಿಮಾ ನಾಯಕ್ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು. ಈ ಸಂದರ್ಭ ಶಾಲಾ ದ್ವೈಮಾಸಿಕ ಪತ್ರಿಕೆ ದರ್ಪಣವನ್ನು ಬಿಡುಗಡೆಗೊಳಿಸ ಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಎ. ವಿಶ್ವನಾಥ್ ವಹಿಸಿದ್ದರು. ವೇದಿಕೆಯಲ್ಲಿ ಉಪ ಪ್ರಾಂಶುಪಾಲೆ ಪಿ.ಕೆ. ನಳಿನಿ, ಶಿಕ್ಷಕರಾದ ಮಹಂತೇಶ್ ಕೋಠಿ, ಉಷಾ ರಾಣಿ, ಅಶ್ವಿನಿ, ಗಂಗಮ್ಮ, ಕಸ್ತೂರಿ, ಬಂಡೇಪ, ಶೈನಿ ಮತ್ತಿತರರಿದ್ದರು.