ಮಡಿಕೇರಿ, ಸೆ.8 : ನಕ್ಸಲರು ತಮ್ಮ ಬದುಕಿಗೆ ಬೆಂಕಿ ಹಚ್ಚಿಕೊಂಡು ದಿಕ್ಕಿಲ್ಲದವರಿಗೆ ಬೆಳಕು ನೀಡುತ್ತಾರೆ, ಆದರೆ, ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ಸಮಾಜಕ್ಕೆ ಬೆಂಕಿ ಹಚ್ಚಿ ತಮ್ಮ ಮೈ ಕಾಯಿಸಿಕೊಳ್ಳುವ ಪ್ರವೃತ್ತಿಯವರೆಂದು ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮನ್ನು ಸೇರಿದಂತೆ ತಮ್ಮ ಕುಟುಂಬ ವರ್ಗದ ವಿರುದ್ಧ ಎನ್.ಯು.ನಾಚಪ್ಪ ಅವರು ಮಾಡಿರುವ ಆರೋಪಗಳನ್ನು ತೀವ್ರವಾಗಿ ಖಂಡಿಸಿದರು. ನಕ್ಸಲ್ ಮಾರ್ಗ ಸರಿ ಇಲ್ಲವೆಂಬುದು ನಮ್ಮ ವಾದವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿಯೆ ನ್ಯಾಯ ಪಡೆಯಲಿ ಎಂದು ಸಲಹೆ ನೀಡುವವರು ನಾವು. ಆದರೆ, ನಕ್ಸಲರ ಬಗ್ಗೆ ಮಾತನಾಡುವ ನಾಚಪ್ಪ ಅವರಿಗೆ ಸಮಾಜದ ಬಗ್ಗೆ ಕಾಳಜಿ ಇಲ್ಲ ಮತ್ತು ಮಾತನಾಡುವ ನೈತಿಕತೆಯೂ ಇಲ್ಲವೆಂದು ಟೀಕಿಸಿದರು.
ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನೋಂದಣಿ ಗೊಂಡಿಲ್ಲ ವೆಂದು ಆರೋಪಿಸಿದ ಸುಬ್ಬಯ್ಯ, ಈ ಸಂಘಟನೆಗೆ ನಾಚಪ್ಪನವರೇ ಎಲ್ಲವೂ ಆಗಿದ್ದು, ಯಾವುದೇ ಬೈಲಾಗಳಾಗಲಿ ಅಥವಾ ಸದಸ್ಯರಾಗಲಿ ಇಲ್ಲ. ಕೊಡವರ ಹೆಸರಿನಲ್ಲಿ ಕೊಡವರನ್ನು ನಾಚಪ್ಪ ವಂಚಿಸುತ್ತಿದ್ದಾರೆ; ಸಿಎನ್ಸಿ ಸಂಘಟನೆಯ ಕಾರ್ಯ ಚಟುವಟಿಕೆ ಮತ್ತು ಆದಾಯ ಮೂಲದ ಬಗ್ಗೆ ಸಿಬಿಐ ತನಿಖೆ ಆಗಬೇಕೆಂದು ಒತ್ತಾಯಿಸಿದರು.
ಕೊಡವ ಸಾಂಪ್ರ ದಾಯಿಕ ಹಬ್ಬಗಳನ್ನು ನಿಗದಿತ ದಿನಾಂಕಕ್ಕಿಂತ ಮುಂಚಿತವಾಗಿ ಆಚರಿಸುವ ಮೂಲಕ ಕೊಡವ ಸಂಸ್ಕøತಿಯನ್ನು ನಾಚಪ್ಪ ವಿಕೃತಗೊಳಿಸುತ್ತಿದ್ದಾರೆ. ತನಗಿಷ್ಟ ಬಂದಂತೆ ಕೊಡವರ ಹಬ್ಬಗಳನ್ನು ಆಚರಿಸಲು ಮತ್ತು ದೇವಟ್ ಪರಂಬುವಿನಲ್ಲಿ ಕಲ್ಲುಗಳನ್ನು ಸ್ಥಾಪಿಸಲು ಕೊಡವರು ಅಧಿಕಾರ ನೀಡಿದ್ದಾರೆಯೆ ಎಂದು ಪ್ರಶ್ನಿಸಿದರು. ಅಖಿಲ ಕೊಡವ ಸಮಾಜ, ಕೊಡವ ಸಮಾಜ ಹಾಗೂ ಸರ್ವ ಕೊಡವರ ಅಭಿಪ್ರಾಯ ಸಂಗ್ರಹಿಸಿ ದೇವಟ್ ಪರಂಬು ವಿಚಾರದಲ್ಲಿ ಮುಂದು ವರಿಯಬೇಕಾಗಿದೆ. ಆದರೆ, ರಾತೋರಾತ್ರಿ ಕಲ್ಲುಗಳನ್ನು ಸ್ಥಾಪಿಸಿ ಕೊಡವರ ಮಾನವನ್ನು ಹರಾಜು ಹಾಕಲಾಗಿದೆ. ಮೀಸಲು ಅರಣ್ಯ ಪ್ರದೇಶವನ್ನು ಪ್ರವೇಶಿಸಿದ ನಾಚಪ್ಪ ವಿರುದ್ಧ ಅರಣ್ಯ ಕಾಯ್ದೆಯಡಿ ಸೆಕ್ಷನ್ಗಳನ್ನು ಹಾಕಿ ದೂರು ದಾಖಲಿಸಿಕೊಳ್ಳದ ಅರಣ್ಯಾಧಿಕಾರಿ ಗಳು ಸಿಎನ್ಸಿ ಚಟುವಟಿಕೆಗೆ ಬೆಂಬಲ ನೀಡಿರುವದಾಗಿ ಸುಬ್ಬಯ್ಯ ಆರೋಪಿಸಿದರು