ಸೋಮವಾರಪೇಟೆ,ಅ.9: ನವರಾತ್ರಿ ಸಮಯದಲ್ಲಿ ಗೊಂಬೆಗಳ ಪೂಜೆಯೂ ಹೆಚ್ಚಿನ ಮಹತ್ವ ಪಡೆದಿದ್ದು, ನಗರದ ದೇವಾಲಯ ಹಾಗೂ ವಿವಿಧ ಮನೆಗಳಲ್ಲಿ ಇಂತಹ ಪೂಜೆಯನ್ನು ಪ್ರತಿವರ್ಷ ಆಚರಿಸಿಕೊಂಡು ಬರಲಾಗುತ್ತಿದೆ.
ನೂರಾರು ಬಗೆಯ ಗೊಂಬೆಗಳನ್ನು ಇಟ್ಟು ದಿನಂಪ್ರತಿ ವಿಶೇಷ ಪೂಜೆ ಸಲ್ಲಿಸುವದು ಕಂಡುಬರುತ್ತಿದ್ದು, ಇಲ್ಲಿನ ನೇಕಾರರ ಕುರುಹಿನಶೆಟ್ಟಿ ಶ್ರೀ ರಾಮಮಂದಿರದಲ್ಲಿ ದಸರಾ ಹಬ್ಬದ ಪ್ರಯುಕ್ತ ಗೊಂಬೆಗಳನ್ನು ಇಟ್ಟು ಪೂಜಿಸಲಾಗುತ್ತಿದೆ.
ಪ್ರದರ್ಶನದಲ್ಲಿ ಮೈಸೂರು ಅರಮನೆಯ ಅಂಬಾರಿ ಮೆರವಣಿಗೆ, ಪ್ರಾಣಿ ಪಕ್ಷಿಗಳು ಸೇರಿದಂತೆ ನೂರಾರು ಬಗೆಯ ಗೊಂಬೆಗಳನ್ನು ಪ್ರದರ್ಶನ ಕ್ಕಿಡಲಾಗಿದೆ. ಸೋಮವಾರಪೇಟೆ ವ್ಯಾಪ್ತಿಯಲ್ಲಿ ಕಳೆದ ಹಲವು ವರ್ಷಗಳಿಂದ ನವರಾತ್ರಿ ಸಮಯದಲ್ಲಿ ಗೊಂಬೆಗಳನ್ನು ಪೂಜಿಸಿಕೊಂಡು ಬರುತ್ತಿರುವದನ್ನು ಸಾಮಾನ್ಯ.
ನವರಾತ್ರಿ ಹಬ್ಬದಾಚರಣೆ ಸಂದರ್ಭ ಹೆಚ್ಚಿನ ಕಡೆಗಳಲ್ಲಿ ಗೊಂಬೆಗಳನ್ನು ಪೂಜಿಸುವದು ಸಾಮಾನ್ಯವಾಗಿದ್ದು, ಸಾಂಸ್ಕøತಿಕ ವಾಗಿಯೂ ಗೊಂಬೆಗಳ ಪೂಜೆ ಪ್ರಾಮುಖ್ಯತೆ ಹೊಂದಿದೆ ಎಂದು ಅರ್ಚಕ ಮೋಹನ್ ಮೂರ್ತಿ ಹೇಳಿದರು.