ಗೋಣಿಕೊಪ್ಪ, ನ. 5: ನಮ್ಮ ನಾಡಿನಲ್ಲಿ ಕನ್ನಡಿಗರಾದ ನಾವುಗಳೇ ಅಪರಿಚಿತರಾಗುವ ಸನ್ನಿವೇಶವಾಗಿರು ವದು ಆತಂಕಕಾರಿ ಬೆಳವಣಿಗೆ ಎಂದು ಗೋಣಿಕೊಪ್ಪ ವೃತ್ತ ನಿರೀಕ್ಷಕ ಪಿ.ಕೆ. ರಾಜು ಆತಂಕ ವ್ಯಕ್ತಪಡಿಸಿದರು.
ಪೊನ್ನಂಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ತಾಲೂಕು ಘಟಕ, ಪೊನ್ನಂಪೇಟೆ ಹೋಬಳಿ ಸಮಿತಿಯಿಂದ ಆಯೋಜನೆಗೊಂಡಿದ್ದ 60ನೇ ವರ್ಷದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಾತನಾಡಿದರು. ಕರ್ನಾಟಕದ ಕವಿಗಳಿಗೆ ಬಹುಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಬಂದ ಹೆಗ್ಗಳಿಕೆ ಇದೆ. ಇಂಗ್ಲೀಷ್‍ಗೆ ಲಿಪಿ ಇಲ್ಲ ಕನ್ನಡಕ್ಕೆ ತನ್ನದೇ ಆದ ಲಿಪಿ ಇದ್ದು ಪ್ರಪಂಚದಲ್ಲೇ ಅಕ್ಷರ ರಾಣಿ ಕನ್ನಡವಾಗಿದೆ. ನಮ್ಮ ಪೋಷಕರಲ್ಲಿ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮಕ್ಕೆ ಸೇರಿಸುವ ವ್ಯಾಮೋಹ ಕಡಿಮೆಯಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕರವೇಯ ಜಿಲ್ಲಾ ಅಧÀ್ಯಕ್ಷ ವೆಂಕಟೇಶ್ ಪೂಜಾರಿ ಕನ್ನಡ ನಾಡು,ನುಡಿ, ನೆಲ,ಜಲಕ್ಕಾಗಿ ಕರವೇಯ ಕಾರ್ಯಕರ್ತರು ನಿರಂತರ ಹೋರಾಟ ನಡೆಸುತ್ತಿದ್ದಾರೆ ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ ಪೊನ್ನಂಪೇಟೆ ಅರಣ್ಯ ಕಾಲೇಜಿನ ಪ್ರಾಧ್ಯಾಪಕ ಅಶೋಕ ಬಿ. ದಿವಟರ ಮಾತನಾಡಿ ಕನ್ನಡ ನಾಡು ನುಡಿ, ನೆಲ, ಜಲಕ್ಕಾಗಿ ಹೋರಾಟ ಅನಿವಾರ್ಯ ಎಂದರು. ಸಭೆಯ ಅಧ್ಯಕ್ಷತೆಯನ್ನು ಕರವೇಯ ಪೊನ್ನಂಪೇಟೆ ಅಧ್ಯಕ್ಷರಾದ ಟಿ.ಎಸ್. ಪುಟ್ಟಸ್ವಾಮಿ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸ್ಥಳೀಯ ಗಾಮ ಪಂಚಾಯಿತಿ ಅಧ್ಯಕ್ಷೇ ಮೂಕಳೇರ ಸುಮಿತಾ, ಉಪಾಧ್ಯಕ್ಷೆ ಮಂಜುಳಾ ಸುರೇಶ್, ಕರವೇಯ ಕಾನೂನು ಸಲಹೆಗಾರ ವಿ.ಜಿ. ಮಂಜುನಾಥ್ ಸೇರಿದಂತೆ ಕರವೇಯ ಪದಾಧಿಕಾರಿಗಳಾ ಪಂಕಜಾಕ್ಷಿ, ಜಯಮ್ಮ, ಸರೋಜ, ದಿಲೀಪ್, ಜಿಲ್ಲಾಕಾರ್ಯದರ್ಶಿ ಸತೀಶ್, ಕಾರ್ಯಕ್ರಮದ ವಿವಿಧ ಪ್ರಾಯೋಜಕರಾದ ವೆಂಕಟೇಶ್, ಬಸ್ ಮಾಲೀಕರಾದ ಪಿ.ಟಿ. ರಮೇಶ್, ಪೊನ್ನಂಪೇಟೆಯ ಕೆ.ರಾಜು, ಇ.ಹರೀಶ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಕರವೇ ಯಿಂದ ಸ್ಥಳೀಯ ಸಾಧಕರಾದ ಗ್ರಾ.ಪಂಯ ಹಿರಿಯ ಪೌರ ಕಾರ್ಮಿಕೆ ನಂಜಮ್ಮ, ಹಳ್ಳಿಗಟ್ಟುವಿನ ಸಮಾಜ ಸೇವಕರಾದ ಜಯರಾಮ್ ಸೋಮಾಯಾಜಿ, ದೇವರಪುರದ ಚೆಕ್ಕೇರ ಮನು, ಪೊನ್ನಂಪೇಟೆಯ ಚಂದ್ರಶೇಖರ್ ಹಾಗೂ ಟಿ.ಆರ್ ವಿನೋದ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸ್ಥಳೀಯ ಏಳನೇ, ಹತ್ತನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿ ಗಳಾದ ಹೆಚ್.ಎಂ. ಗೀತಾಂಜಲಿ, ವಿ.ಪಿ. ಗೌತಮಿ, ಎಂ.ಎಸ್ ಚೇತನ್, ಎಂ.ಜಿ. ಯಶಿಕರವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕನ್ನಡಾಂಭೆಯ ಮೆರವಣಿಗೆಗೆ ಪೊನ್ನಂಪೇಟೆ ಠಾಣಾಧಿಕಾರಿ ಎಸ್.ಎನ್. ಜಯರಾಂ, ಕರವೇಯ ಗೌರವ ಅಧ್ಯಕ್ಷರಾದ ಬಿ.ಎಸ್. ಸುಂದರ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಾಗಾಸೆ, ಮೆರಗು ನೀಡಿದವು ನಾಡ ಗೀತೆಯನ್ನು ಎಸ್‍ಟಿ ಗಿರೀಶ್ ತಂಡ ನಡೆಸಿಕೊಟ್ಟವು. ಸ್ವಾಗತವನ್ನು ಕರವೇಯ ಹೆಚ್.ಎಸ್. ಮಹೇಶ್ ಶಿವಕಾಲೋನಿ ನೆರÀವೇರಿಸಿದರು, ಕರವೇಯ ಪ್ರಧಾನ ಕಾರ್ಯದರ್ಶಿ ಪಿ.ಟಿ. ಸುರೇಶ್ ವರದಿ ವಾಚಿಸಿದರು. ಚಂದನ ಹಾಗೂ ಶಿವಪ್ರಸಾದ್ ನಿರೂಪಿಸಿದರು. ಕರವೇಯ ಕೆ.ಡಿ. ವಿನು ವಂದಿಸಿದರು, ಸ್ಥಳೀಯ ಕಲಾವಿದÀರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.