ಹೇಗೆ ಮೊಬೈಲ್ ಫೋನ್ನಲ್ಲಿ ಪ್ರೀಪೇಡ್ ಕಾರ್ಡ್ ಬರುತ್ತದೋ ಹಾಗೆಯೇ ಬ್ಯಾಂಕ್ಗಳಲ್ಲಿ ಹಣ ಖರ್ಚು ಮಾಡಲು ಪ್ರೀಪೇಯ್ಡ್ ಕಾರ್ಡ್ ದೊರೆಯುತ್ತದೆ. ವಹಿವಾಟು ಮಾಡಲು ಒಂದು ದೊಡ್ಡ ಪ್ಲಾಟ್ಫಾರ್ಮ್ ಇದಾಗಿದೆ. ಇದರಿಂದ ನೀವು ಖರೀದಿ ಮಾಡಬಹುದು. ಹಣ ಕಳುಹಿಸಬಹುದು, ಹಣ ಪಡೆಯಬಹುದು. ಮತ್ತು ಕೆಲಸ ಎಷ್ಟು ಸರಳವೆಂದರೆ, ನೀವು ವಾಟ್ಸಾಪ್ ಸಂದೇಶ ಕಳುಹಿಸಿದಂತೆ ಓದು-ಬರಹ ಬರೆದು ಫಾರ್ವರ್ಡ್ ಮಾಡಲೂ ಬರುತ್ತದೆ. ಇಷ್ಟೇ ಅಲ್ಲ ಟೆಕ್ನಾಲಜಿ ಎಷ್ಟು ಸರಳವಾಗುತ್ತಿದೆ ಎಂದರೆ, ಈ ಕೆಲಸಕ್ಕೆ ದೊಡ್ಡ ಸ್ಮಾರ್ಟ್ ಫೋನ್ನ ಅವಶ್ಯಕತೆಯೂ ಇಲ್ಲ. ಸಾಧಾರಣವಾದ ಫ್ಯೂಚರ್ ಫೋನ್ ಇದೆಯಲ್ಲ ಅದರಿಂದÀ ಕ್ಯಾಶ್ ಟ್ರಾನ್ಸ್ಫರ್ ಮಾಡಬಹುದಾಗಿದೆ. ದೋಬಿ ಆಗಿರಲಿ, ತರಕಾರಿ ಮಾರುವವನಾಗಿರಲಿ, ಹಾಲು ಮಾರುವವನಾಗಿರಲಿ, ಪೇಪರ್ ಮಾರುವವನಾಗಿರಲಿ, ಚಹಾ ಮಾರುವವನಾಗಿರಲಿ ಪ್ರತಿಯೊಬ್ಬರೂ ಆರಾಮವಾಗಿ ಇದರ ಉಪಯೋಗ ಮಾಡಬಹುದಾಗಿದೆ. ನಾನು ಕೂಡ ಈ ವ್ಯವಸ್ಥೆಯನ್ನು ಸರಳೀಕರಣ ಗೊಳಿಸಲು ಹೆಚ್ಚು ಒತ್ತು ನೀಡಿದ್ದೇನೆ. ಎಲ್ಲಾ ಬ್ಯಾಂಕ್ಗಳೂ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೆ ಈಗ ಆನ್ಲೈನ್ ರೀಚಾರ್ಜ್ ಖರ್ಚು ಬರುತ್ತಿತ್ತಲ್ಲ ಅದು ಕೂಡ ನಾವು ರದ್ದು ಮಾಡಿದ್ದೇವೆ. ಕ್ಯಾಶ್ಲೆಸ್ ಸೊಸೈಟಿ ಮೂಮೆಂಟ್ಗೆ ಒತ್ತು ನೀಡಲು ಇನ್ನೂ ಇಂತಹ ಹಲವಾರು ಕಾರ್ಡ್ಗಳಿಗೆ ಎಷ್ಟು ಖರ್ಚಾಗುತ್ತಿತ್ತೊ ಅದನ್ನೂ ರದ್ದು ಮಾಡಿದ್ದೇವೆ. ಎಂಬದನ್ನು ಕಳೆದ ಕೆಲವು ದಿನಗಳಿಂದ ನೀವು ಪತ್ರಿಕೆಗಳಲ್ಲಿ ಓದಿರಬಹುದು. ನನ್ನ ಯುವ ಮಿತ್ರರೆ, ನೀವೆಲ್ಲ ಈ ಮಹಾನ್ ಕೆಲಸಗಳಲ್ಲಿ ಸಕ್ರಿಯರಾಗಿದ್ದೀರಿ ಎಂದು ನನಗೆ ಗೊತ್ತು. ವಾಟ್ಸಾಪ್ನಲ್ಲಿ ಎಂತೆಂತಹ ಕ್ರಿಯೇಟೀವ್ ಮೆಸೇಜ್ಗಳನ್ನು ನೀವು ಕಳುಹಿಸುತ್ತೀರಿ. ಸ್ಲೋಗನ್ಗಳು, ಕವಿತೆಗಳು, ವಿಷಯಗಳ, ಕಾರ್ಟೂನ್ಗಳು, ಹೊಸ-ಹೊಸ ಕಲ್ಪನೆಗಳೂ, ನಗು, ಹಾಸ್ಯ ಚಟಾಕಿ ಈ ಎಲ್ಲವನ್ನೂ ನಾನು ಗಮನಿಸುತ್ತಿದ್ದೇನೆ. ಮತ್ತು ಸವಾಲುಗಳ ಮಧ್ಯೆಯೇ ಈ ನಮ್ಮ ಯುವ ಪೀಳಿಗೆ ಸೃಜನಾತ್ಮಕ ಶಕ್ತಿ ಹೊಂದಿದೆ ಎಂಬದು ನನಗನಿಸುತ್ತದೆ. ಹಿಂದೊಮ್ಮೆ ಯುದ್ಧ ಭೂಮಿಯಲ್ಲಿ ಗೀತೆಯ ಉದ್ಭವವಾದಂತ ಭರತ ಭೂಮಿಯ ವಿಶೇಷತೆ ಇದು ಎಂಬದಕ್ಕೆ ಸಾಕ್ಷಿ ಎಂದು ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ, ನನಗೆ ನಿಮ್ಮ ಸಹಾಯಬೇಕು. ನಾನು ಮತ್ತೊಮ್ಮೆ ಮಗದೊಮ್ಮೆ ಹೇಳುತ್ತಿದ್ದೇನೆ. ನನಗೆ ನಿಮ್ಮ ಸಹಾಯಬೇಕೇ ಬೇಕು. ನೀವು ನನ್ನ ದೇಶದ ಯುವಕರು. ಕೆಲಸ ಮಾಡುವಿರೆಂದು ನನಗೆ ವಿಶ್ವಾಸವಿದೆ. ನೀವು ಒಂದು ಕೆಲಸ ಮಾಡಿ, ಇಂದೇ ಸ್ವತಃ ಕ್ಯಾಶ್ಲೆಸ್ ಸೊಸೈಟಿಯ ಭಾಗೀದಾರರಾಗುವಿ ರೆಂದು ಸಂಕಲ್ಪ ಕೈಗೊಳ್ಳಿ. ನಿಮ್ಮ ಮೊಬೈಲ್ ಫೋನ್ನಲ್ಲಿ ಆನ್ಲೈನ್ ಖರ್ಚು ಮಾಡುವ ಎಷ್ಟಲ್ಲಾ ಟೆಕ್ನಾಲಜಿಗಳಿವೆಯೋ ಅವೆಲ್ಲವೂ ಇರುತ್ತವೆ. ಇಷ್ಟೇ ಅಲ್ಲ ಪ್ರತಿದಿನ ಅರ್ಧಗಂಟೆ ಒಂದು ಗಂಟೆ, ಇಲ್ಲ ಎರಡು ಗಂಟೆಯ ಸಮಯ ಮೀಸಲಿಟ್ಟು, ಕಡಿಮೆಯೆಂದರೂ ಹತ್ತು ಕುಟುಂಬಗಳಿಗೆ ಟೆಕ್ನಾಲಜಿ ಎಂದರೇನು ? ಅದನ್ನು ಹೇಗೆ ಬಳಸಲಾಗುತ್ತದೆ ? ಹೇಗೆ ತಮ್ಮ ಬ್ಯಾಂಕ್ಗಳ ಆ್ಯಪ್ಗಳನ್ನು ಡೌನ್ಲೋಡ್ ಮಾಡಲಾಗುತ್ತದೆ ತಮ್ಮ ಖಾತೆಯಲ್ಲಿ ಇರುವ ಹಣವನ್ನು ಹೇಗೆ ಖರ್ಚು ಮಾಡಬಹುದು. ಹೇಗೆ ಅಂಗಡಿಯವರಿಗೆ ಕೊಡಬಹುದು ? ಎಂಬದನ್ನು ತಿಳಿಸಿಕೊಡಿ. ಅಂಗಡಿಯವರು ಹೇಗೆ ವ್ಯಾಪಾರ ಮಾಡಬಹುದು. ಎಂಬದನ್ನು ಕಲಿಸಿಕೊಡಿ. ನೀವು ಸ್ವತಃ ಈ ಕ್ಯಾಶ್ಲೆಸ್ ಸೊಸೈಟಿಯ ನೋಟಿನ ಗೊಂದಲದಿಂದ ಹೊರಬರುವ ಅಭಿಯಾನ, ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸುವ ಅಭಿಯಾನ, ಕಪ್ಪು ಹಣದಿಂದ ಮುಕ್ತಿ ಹೊಂದುವ ಅಭಿಯಾನ, ಜನರನ್ನು ಸಂಕಷ್ಟಗಳಿಂದ, ಸಮಸ್ಯೆಗಳಿಂದ ಮುಕ್ತಗೊಳಿಸುವ ಅಭಿಯಾನ ಇವುಗಳ ನೇತೃತ್ವ ವಹಿಸಬೇಕಾಗಿದೆ. ಒಮ್ಮೆ ಜನರಿಗೆ ರುಪೇ ಕಾರ್ಡ್ ಬಳಕೆ ಹೇಗೆ ಎಂದು ಕಲಿಸಿದರೆ, ಬಡವರ ಆಶೀರ್ವಾದ ನಿಮಗೆ ಲಭಿಸುತ್ತದೆ. ಸಾಮಾನ್ಯ ನಾಗರಿಕನಿಗೆ ಈ ವ್ಯವಸ್ಥೆಗಳ ಬಗ್ಗೆ ತಿಳಿಸಿಕೊಟ್ಟರೆ ಬಹುಶಃ ಅವನು ಎಲ್ಲಾ ಚಿಂತೆಗಳಿಂದ ಮುಕ್ತನಾಗ ಬಹುದು. ಮತ್ತು ಈ ಕೆಲಸವನ್ನು ಹಿಂದೂಸ್ಥಾನದ ಎಲ್ಲಾ ಯುವಕರು ಮಾಡಲಾರಂಭಿಸಿದರೆ, ಹೆಚ್ಚು ಸಮಯಬೇಕಾಗಲಿಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ. ಒಂದು ತಿಂಗಳ ಒಳಗಾಗಿಯೇ ನಾವು ವಿಶ್ವದಲ್ಲೇ ಒಂದು ಆಧುನಿಕ ಹಿಂದೂಸ್ಥಾನವಾಗಿ ಹೊರ ಹೊಮ್ಮಬಹುದಾಗಿದೆ. ಮತ್ತು ಈ ಕೆಲಸವನ್ನು ನೀವು ನಿಮ್ಮ ಮೊಬೈಲ್ ಫೋನ್ ಮೂಲಕ ಮಾಡಬಹುದಾಗಿದೆ. ಪ್ರತಿದಿನ 10 ಮನೆಗಳಿಗೆ ಹೋಗಿ ಮಾಡ ಬಹುದಾಗಿದೆ. ಪ್ರತಿದಿನ 10 ಕುಟುಂಬಗಳನ್ನು ಇದರೊಂದಿಗೆ ಜೋಡಣೆ ಮಾಡಬಹುದು. ಕೇವಲ ಸಮರ್ಥನೆಯೊಂದೇ ಸಲ್ಲದು ನಾವೂ ಪರಿವರ್ತನೆಯ ಸೇನಾನಿಗಳಾಗಬೇಕು ಆ ಮೂಲಕ ಪರಿವರ್ತನೆಯನ್ನು ಸಾಧಿಸಿಯೇ ತಿರುತ್ತೇವೆ. ದೇಶವನ್ನು ಭ್ರಷ್ಟಾಚಾರ ಮತ್ತು ಕಪ್ಪು ಹಣದಿಂದ ಮುಕ್ತಗೊಳಿಸುವ ಸಮರವನ್ನು ನಾವು ಮುಂದುವರಿಸುತ್ತೇನೆ. ಬದಲಾವಣೆ ಆಗುವದಾದರೆ ಅದು ಯುವಕರಿಂದ, ಕ್ರಾಂತಿ ಆಗುವದಾದರೂ ಅದು ಯುವಕರಿಂದ ಎಂಬ ಒಂದು ವಿಷಯವನ್ನು ಒಪ್ಪಿಕೊಳ್ಳಲೇಬೇಕು.
ಯುವಕರೇ, ನೀವು ಈ ಅಭಿಯಾನವನ್ನು ಮುಂದುವರಿಸಿ ಪ್ರತಿ ಸ್ಕೂಲು, ಕಾಲೇಜು, ಯೂನಿವರ್ಸಿಟಿ, ಎನ್.ಸಿ.ಸಿ., ಎನ್.ಎಸ್.ಎಸ್.ಗಳಲ್ಲಿ ಸಾಮೂಹಿಕ ರೂಪದಲ್ಲಿ, ವ್ಯಕ್ತಿಗತವಾಗಿ, ಈ ಕೆಲಸವನ್ನು ಮಾಡಿ ಎಂದು ಆಮಂತ್ರಿಸುತ್ತಿದ್ದೇನೆ.
(ಮುಗಿಯಿತು)
(ಸಂಗ್ರಹ) ಸಲೀನಾ ಅಶ್ರಫ್, ಪಾಲಿಬೆಟ್ಟ.