ಕುಶಾಲನಗರ, ಅ. 24: ರಾಜ್ಯದಲ್ಲಿ ತಲೆದೋರಿರುವ ಜಲ ವಿವಾದವನ್ನು ಗಂಭೀರವಾಗಿ ಪರಿಗಣಿಸುವz Àರೊಂದಿಗೆ ನದಿ ಸಂರಕ್ಷಣೆಗೆ ಆದ್ಯತೆ ನೀಡಬೇಕಾಗಿದೆÉ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‍ಗೌಡ ತಿಳಿಸಿದರು.

ಮುಳ್ಳುಸೋಗೆಯ ತಪೋವನದ ಸಭಾಂಗಣದಲ್ಲಿ ನಡೆದ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ 2ನೇ ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ ಹಾಗೂ ನೂತನ ಪದಾಧಿಕಾರಿಗಳ ನೇಮಕಾತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಲೆನಾಡು ಪ್ರದೇಶವಾದ ಕೊಡಗಿನಲ್ಲಿ ಮಳೆಯ ಪ್ರಮಾಣ ಕ್ಷೀಣಿಸುತ್ತಿರುವದು ಆತಂಕ ಕಾರಿ ವಿಚಾರವಾಗಿದೆ. ಸಂಪದ್ಭರಿತ ಅರಣ್ಯ ಸಂಪತ್ತು ನಾಶಗೊಳ್ಳುತ್ತಿರುವ ಕಾರಣ ಕೊಡಗಿನಲ್ಲಿ ಹವಾಮಾನ ವೈಪರೀತ್ಯ ಎದುರಾಗಿದೆ. ಇದರೊಂದಿಗೆ ಜೀವನದಿ ಕಾವೇರಿ ಕೂಡ ತನ್ನ ನೆಲೆ ಕಳೆದುಕೊಳ್ಳುವ ಆತಂಕ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರÀ ಕೆ.ಕೆ. ಮಂಜುನಾಥ್‍ಕುಮಾರ್ ಮಾತನಾಡಿ, ದೇಶದಲ್ಲಿ ಸಾವಿರಾರು ಸಂಘಟನೆಗಳು ವಿವಿಧ ದೃಷ್ಠಿಕೋನ ಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಇವೆಲ್ಲವೂ ಕೂಡ ರಾಜಕೀಯ ರಹಿತ ನಿಸ್ವಾರ್ಥ ಸೇವೆಗೆ ತಮ್ಮ ಕಾರ್ಯವನ್ನು ಮುಡಿ ಪಾಗಿಡಬೇಕಿದೆ. ಭ್ರಷ್ಟ ವ್ಯವಸ್ಥೆಯಿಂದಾಗಿ ಹೆಚ್ಚುತ್ತಿರುವ ಶೋಷಿತರ ಪರ ಸಂಘ-ಸಂಸ್ಥೆಗಳು ಧ್ವನಿ ಎತ್ತುವ ಮೂಲಕ ಸಮಾಜದ ಅಭಿವೃದ್ಧಿಗೆ ಕಾರಣೀ ಭೂತರಾಗ ಬೇಕೆಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ರಾಜ್ಯದ ಪ್ರತೀ ಶಾಲೆಗಳಲ್ಲೂ ಕೂಡ ನಾಡಗೀತೆ ಹಾಡುವ ಕಾರ್ಯ ಕಡ್ಡಾಯವಾಗಿ ಜಾರಿಗೊಳ್ಳುವ ಮೂಲಕ ಪ್ರತಿಯೊಬ್ಬರಲ್ಲೂ ದೇಶಾಭಿಮಾನ ಮೂಡಿಸುವದು ಅತ್ಯಗತ್ಯವಾಗಿದೆ. ಸರಕಾರದಿಂದ ಗುರುತಿಸಲ್ಪಡದ ಹಲವಾರು ಪ್ರತಿಭೆಗಳನ್ನು ಸಂಘ ಸಂಸ್ಥೆಗಳು ಗುರುತಿಸಿ ಪ್ರೋತ್ಸಾಹಿಸುತ್ತಾ ಬರುತ್ತಿರುವದು ಹೆಮ್ಮೆಯ ವಿಚಾರವಾಗಿದೆ ಎಂದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಸಂಚಾಲಕÀ ಎಂ.ಎನ್. ಚಂದ್ರಮೋಹನ್ ಮಾತನಾಡಿ, ಸಂಘಟನೆಗಳು ಕೇವಲ ಕಾರ್ಯಕ್ರಮಗಳಿಗೆ, ಪ್ರಚಾರಕ್ಕೆ ಸೀಮಿತವಾಗದೆÉ ಗ್ರಾಮೀಣ ಸಮಸ್ಯೆಗಳ ಕುರಿತು ಅವಲೋಕನ ನಡೆಸಿ ಜನರಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದರು.

ಕುಶಾಲನಗರ ಪ್ರೆಸ್‍ಕ್ಲಬ್ ಟ್ರಸ್ಟ್‍ನ ಅಧ್ಯಕ್ಷ ಹೆಚ್.ಎಂ. ರಘು ಮಾತನಾಡಿ ದರು. ವೇದಿಕೆಯ ಕಾರ್ಯದರ್ಶಿ ಕುಮಾರ್ ಪ್ರಾಸ್ತಾವಿಕ ನುಡಿಗಳಾಡಿದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಸಾತಪ್ಪನ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯೆ ಜ್ಯೋತಿ ಪ್ರಮೀಳ, ವಕೀಲ ಸಂತೋಷ್ ಕುಮಾರ್, ಕರ್ನಾಟಕ ಜನಪರ ವೇದಿಕೆಯ ರಾಜ್ಯದ ವಿವಿಧ ಘಟಕಗಳ ಪ್ರಮುಖ ರಾದ ಶಿವಣ್ಣ, ಅಶ್ವಥ್, ರಾಜೇಶ್, ಮೋಹನ, ನರಸಿಂಹ, ಜಯಚಂದ್ರ, ಏಸು, ಮಹದೇವಸ್ವಾಮಿ ಇದ್ದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಪ್ರಮುಖರಾದ ಜೋಸೆಫ್, ನಾ.ರ. ವಿಜಯ, ಸಜೀ, ಆರ್. ಶಾರದ, ಸುಮತಿ, ಆರ್.ರವಿ, ಎ.ಪಿ. ಇಂದಿರಾ, ಸಾತಪ್ಪನ್, ಜ್ಯೋತಿ ಪ್ರಮೀಳ, ರಾಜು, ಹೆಚ್.ಎಂ. ರಘು, ಹೆಚ್.ಎಂ. ವೆಂಕಟೇಶ್, ಬಿ.ಎಲ್. ತ್ಯಾಗರಾಜ್, ನಯನತಾರ ಅವರನ್ನು ವೇದಿಕೆ ಪರವಾಗಿ ಗಣ್ಯರು ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷÀ ಪಿ.ಬಿ. ಸಹದೇವ್, ಸಂಘಟನಾ ಕಾರ್ಯದರ್ಶಿ ಜಿ. ಸಂಪತ್‍ಕುಮಾರ್, ನಗರಾಧ್ಯಕ್ಷ ಫ್ರಾನ್ಸಿಸ್ ಲೋಬೊ, ಆಟೋ ಚಾಲಕರ ಸಂಘದ ಅಧ್ಯಕ್ಷ ಮಹೇಶ್, ವೇದಿಕೆಯ ಪದಾಧಿಕಾರಿಗಳು ಇದ್ದರು.

ವಿದ್ಯಾರ್ಥಿನಿ ಶಿಲ್ಪಾಬಾಯಿ ಪ್ರಾರ್ಥಿಸಿ, ಶಿಕ್ಷಕ ಉ.ರಾ.ನಾಗೇಶ್ ನಿರೂಪಿಸಿದರೆ, ಸಹದೇವ್ ಸ್ವಾಗತಿಸಿ, ಹೆಚ್.ಎಂ. ರಘು ವಂದಿಸಿದರು.