ಕುಶಾಲನಗರ, ನ. 27: ನಕಲಿ ನಂಬರ್ ಬೋರ್ಡ್ ಹಾಕಲಾಗಿದ್ದ ಜೆಸಿಬಿಯನ್ನು ಆರ್‍ಟಿಓ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.ಕುಶಾಲನಗರದಲ್ಲಿಂದು ಅರಕಲಗೋಡಿನ ವ್ಯಕ್ತಿಯೊಬ್ಬರಿಗೆ ಸೇರಿದ ಜೆಸಿಬಿಯನ್ನು ಕೆಲಸಕ್ಕೆ ಬಳಸಲಾಗಿತ್ತು. ಈ ವೇಳೆ ಜೆಸಿಬಿಯನ್ನು ಆರ್‍ಟಿಓ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಜೆಸಿಬಿಗೆ ಕೆ.ಎ. 13 ಎಂ. 7268 ಎಂದು ನಕಲಿ ನಂಬರ್ ಬೋರ್ಡ್ ಹಾಕಿ ಕಳೆದ ಒಂದು ವರ್ಷದಿಂದ ಸಾರಿಗೆ ಇಲಾಖೆಗೆ ಯಾವದೇ ವಾಹನ ತೆರಿಗೆಯನ್ನು ಕಟ್ಟದೆ ವಂಚಿಸಿರುವದು ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ ಮೋಟಾರ್ ವಾಹನ ನಿರೀಕ್ಷಕ ಶರತ್ ಚಂದ್ರ ಹೆಗಡೆ
(ಮೊದಲ ಪುಟದಿಂದ) ಅವರು ಜೆಸಿಬಿಯನ್ನು ಮುಟ್ಟುಗೋಲು ಹಾಕಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕೊಡಗು ವ್ಯಾಪ್ತಿಯಲ್ಲಿ ಹೊರ ಭಾಗದ ಹಲವು ವಾಹನಗಳು ನಂಬರ್ ಬೋರ್ಡ್ ಬದಲಿಸಿ, ವಾಹನ ತೆರಿಗೆ ಪಾವತಿಸದೆ ಸಂಚಾರಿಸುತ್ತಿರುವ ಬಗ್ಗೆ ಮಾಹಿತಿಯಿದ್ದು, ಕಾರ್ಯಾಚರಣೆ ವೇಳೆ ಪತ್ತೆಯಾದರೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವದಾಗಿ ಶರತ್‍ಚಂದ್ರ ಹೆಗಡೆ ಹೇಳಿದ್ದಾರೆ.