ಸೋಮವಾರಪೇಟೆ, ಜ. 10: ದೇಶದಲ್ಲಿಯೇ ಸ್ವಚ್ಛ ಶ್ರದ್ಧಾ ಕೇಂದ್ರ ಎಂಬ ಬಿರುದಿಗೆ ಭಾಜನವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರುಗಳು ಸ್ಥಳೀಯ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಸಮರೋಪಾದಿ ಸ್ವಚ್ಛತಾ ಕಾರ್ಯ ಕೈಗೊಂಡರು.

ಸೋಮವಾರಪೇಟೆ ಯೋಜನಾ ಕಚೇರಿಗೆ ಒಳಪಡುವ ಎಲ್ಲಾ ಒಕ್ಕೂಟಗಳ ವತಿಯಿಂದ ಸ್ಥಳೀಯ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯವನ್ನು ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಕೈಗೊಂಡು, ಸ್ವಚ್ಛತೆಯ ಬಗ್ಗೆ ಸಾರ್ವಜನಿಕ ವಲಯದಲ್ಲೂ ಅರಿವು ಮೂಡಿಸಿದರು.

ಕಟ್ಟೆಬಸವೇಶ್ವರ ದೇವಾಲಯ: ಸೋಮವಾರಪೇಟೆ ‘ಬಿ’ ಒಕ್ಕೂಟ ವತಿಯಿಂದ ಇಲ್ಲಿನ ಕಟ್ಟೆ ಬಸವೇಶ್ವರ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಅಕ್ಕನ ಬಳಗದ ಅಧ್ಯಕ್ಷೆ ಜಲಜಾ ಶೇಖರ್ ಅವರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿ, ದೇಶದ ಪ್ರಧಾನಿ ಮೋದಿ ಅವರೇ ಪೊರಕೆ ಹಿಡಿದು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದ್ದು, ಸ್ಥಳೀಯ ಧಾರ್ಮಿಕ ಕ್ಷೇತ್ರಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲೂ ಸ್ವಚ್ಛತೆ ಕಾಪಾಡುವದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ಸ್ವಚ್ಛತಾ ಕಾರ್ಯದಲ್ಲಿ ಮಹಿಳಾ ಸಮಾಜದ ಅಧ್ಯಕ್ಷೆ ನಳಿನಿ ಗಣೇಶ್, ಯೋಜನಾಧಿಕಾರಿ ವೈ. ಪ್ರಕಾಶ್, ಮೇಲ್ವಿಚಾರಕ ರಮೇಶ್ ಸೇವಾಪ್ರತಿನಿಧಿ ತಾರಾಲಕ್ಷ್ಮೀ, ಒಕ್ಕೂಟದ ಅಧ್ಯಕ್ಷೆ ಉಷಾ ರಾಣಿ, ನಾಗಮ್ಮ, ಪ್ರಮುಖರಾದ ಶೇಖರ್, ಶೈಲಾ, ವಸಂತ್, ಗಣೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಗೌಡಳ್ಳಿ: ಗೌಡಳ್ಳಿಯ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ದೇವಾಲಯ ಸಮಿತಿ ಅಧ್ಯಕ್ಷ ಮಹೇಶ್, ಅರ್ಚಕ ವಿಶ್ವರೂಪ, ಪ್ರಮುಖರಾದ ಮುತ್ತಣ್ಣ, ದಿನೇಶ್, ಸೇವಾಪ್ರತಿನಿಧಿ ಮಹೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಕೆಂಚಮ್ಮನಬಾಣೆ: ಕೆಂಚಮ್ಮನ ಬಾಣೆಯ ಗಣಪತಿ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಸದಸ್ಯರುಗಳು ದೇವಾಲಯದ ಆವರಣವನ್ನು ಶುಚಿಗೊಳಿಸಿದರು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಬಾಲಕೃಷ್ಣ, ಒಕ್ಕೂಟದ ಅಧ್ಯಕ್ಷೆ ಸವಿತಾ, ಸೇವಾ ಪ್ರತಿನಿಧಿ ಚೈತ್ರ ಸೇರಿದಂತೆ ಇತರರು ಭಾಗವಹಿಸಿದ್ದರು.

ಬಜೆಗುಂಡಿ: ಬಜೆಗುಂಡಿ ಒಕ್ಕೂಟದ ವತಿಯಿಂದ ಅಲ್ಲಿನ ಮಾರಿಯಮ್ಮ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಸ್ವಸಹಾಯ ಸಂಘದ ಸದಸ್ಯರುಗಳು ಶುಚಿತ್ವ ಕಾರ್ಯದಲ್ಲಿ ಭಾಗವಹಿಸಿದ್ದರು. ಒಕ್ಕೂಟದ ಅಧ್ಯಕ್ಷೆ ದಿವ್ಯ, ಗ್ರಾ.ಪಂ. ಸದಸ್ಯೆ ಕವಿತಾ, ಸೇವಾಪ್ರತಿನಿಧಿ ಸುನಿತಾ ಸೇರಿದಂತೆ ಇತರರು ಭಾಗವಹಿಸಿದ್ದರು.

ವಳಗುಂದ: ದೊಡ್ಡಮಳ್ತೆ ಗ್ರಾಮ ಪಂಚಾಯಿತಿಯ ವಳಗುಂದ ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಗ್ರಾಮದ ಪ್ರಮುಖರಾದ ಭಾರತಿ, ಲೀಲಾವತಿ, ಅರುಣ್‍ಕುಮಾರ್, ಅನುಕುಮಾರ್ ಸೇರಿದಂತೆ ಸ್ವಸಹಾಯ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.