ಕೆದಕಲ್, ಡಿ. 4: ರಾಷ್ಟ್ರೀಯ ಅಂಚೆ ನೌಕರರ ಸಂಘದ ದ್ವೈವಾರ್ಷಿಕ ಸಮ್ಮೇಳನ ಇಂದು ಬಾಲಭವನದಲ್ಲಿ ನಡೆಯಿತು. ಅಧಿವೇಶನದಲ್ಲಿ ಅಂಚೆ ನೌಕರರ ಸಂಘದ ಕರ್ನಾಟಕ ವಲಯ ಕಾರ್ಯದರ್ಶಿ ಬಿ. ಶಿವಕುಮಾರ್, ಮೂರನೇ ದರ್ಜೆ ನೌಕರರ ಸಂಘದ ವಲಯ ಕಾರ್ಯದರ್ಶಿಗಳಾದ ಕೆ.ಸಿ. ನಂಗಯ್ಯ, ಕರ್ನಾಟಕ ವಲಯ ಗ್ರಾಮೀಣ ಅಂಚೆ ಸೇವಕರ ಸಂಘದ ಕಾರ್ಯದರ್ಶಿ ಎಂ.ಪಿ. ಚಿತ್ರಸೇನ, ಪೋಸ್ಟ್‍ಮೆನ್ ವಲಯ ಕಾರ್ಯದರ್ಶಿಗಳಾದ ಕುರುಡಗಿ ಮೊದಲಾದವರು ಭಾಗವಹಿಸಿ ನೌಕರರ ಸಂಘದ ಕುಂದುಕೊರತೆಗಳನ್ನು ಆಲಿಸಿದರು.
ನಿವೃತ್ತರಾದ ಹಾಗೂ ನೌಕರಿಯಲ್ಲಿ ಬಡ್ತಿ ಹೊಂದಿದವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ನಿಧನರಾದ ನೌಕರರಿಗೆ ಸಂತಾಪ ಸೂಚಿಸಲಾಯಿತು.
ಮುಂದಿನ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮೂರನೇ ದರ್ಜೆ ನೌಕರರ ಸಂಘದ ಅಧ್ಯಕ್ಷರಾಗಿ ಕೆ.ಬಿ. ಗಣೇಶ್, ಕಾರ್ಯದರ್ಶಿಯಾಗಿ ಎಂ.ಎನ್. ಮಂಜುನಾಥ್, ಖಜಾಂಚಿಯಾಗಿ ಹೆಚ್.ವಿ. ರಾಮಣ್ಣ ಹಾಗೂ ಪೋಸ್ಟ್‍ಮೆನ್ ಗ್ರೂಪ್ ಡಿ. ನೌಕರರ ಸಂಘದ ಅಧ್ಯಕ್ಷರಾಗಿ ಕೆ.ಎ. ರಾಧಾಕೃಷ್ಣ, ಕಾರ್ಯದರ್ಶಿಯಾಗಿ ಕೆ.ಎ. ನಾರಾಯಣ, ಖಜಾಂಚಿಯಾಗಿ ಬಿ.ಎಸ್. ಭಾಸ್ಕರ್, ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷೆಯಾಗಿ ಪಿ.ಈ. ಸುಶೀಲ, ಕಾರ್ಯದರ್ಶಿಯಾಗಿ ಕೆ.ಎಂ. ಸತೀಶ್, ಖಜಾಂಚಿಯಾಗಿ ಭವಾನಿ ಇವರುಗಳನ್ನು ಆಯ್ಕೆ ಮಾಡಲಾಯಿತು.