*ಗೋಣಿಕೊಪ್ಪ, ಅ.2: ದೂಳೆಬ್ಬಿಸುತ್ತಾ ಜಿಗಿದು ನೆಗೆಯುತ್ತಾ ಹಾರಿದ ದ್ವಿಚಕ್ರ ವಾಹನದ ಶರವೇಗದ ಸಾಹಸ ಪ್ರದರ್ಶನ ಸಾವಿರಾರು ಕಣ್ಣ್ಣುಗಳಿಗೆ ಹಬ್ಬದ ರಸದೌತಣವನ್ನೇ ನೀಡಿತು. ಬಿಸಿಲು ಲೆಕ್ಕಿಸದೆ ಸಾವಿರಾರು ಕ್ರೀಡಾಭಿಮಾನಿಗಳು ದ್ವಿಚಕ್ರ ರ್ಯಾಲಿ ಪಟುಗಳ ಸಾಹಸವನ್ನು ನೋಡಿ ಆನಂದಿಸಿದರು. ಹರಿಶ್ವಂದ್ರಪುರ ಮನೆಯಪಂಡ ಅಯ್ಯಪ್ಪ ಅವರ ಜಾಗದಲ್ಲಿ ಸೌಥ್ ಕೂರ್ಗ್ ಫಾಮರ್ಸ್ ಅಸೋಸಿಯೇಶನ್ ಮತ್ತು ಕಾವೇರಿ ದಸರಾ ಸಮಿತಿ ಆಶ್ರಯದಲ್ಲಿ ನಡೆದ 14ನೇ ವರ್ಷದ ರಾಷ್ಟ್ರಮಟ್ಟದ ದ್ವಿಚಕ್ರ ಮತ್ತು ನಾಲ್ಕುಚಕ್ರ್ರ ಆಟೋ ಕ್ರಾಸ್ ಸ್ಪರ್ಧೆಯಲ್ಲಿ 2ನೇ ದಿನ ರ್ಯಾಲಿ ಪಟುಗಳು ಸಾಹಸಮಯ ಪ್ರದರ್ಶನ ನೀಡಿದರು. ರಾಜ್ಯದ ಹಲವು ಭಾಗಗಳಿಂದ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಸಾಹಸ ಕ್ರೀಡಾ ಸ್ಪರ್ಧಿಗಳು ಬಾಗವಹಿಸಿ ಆಟೋ ಕ್ರಾಸ್ಗೆ ಮೆರುಗು ತಂದರು.
ದ್ವಿಚಕ್ರ ರ್ಯಾಲಿಯಲ್ಲಿ ಕೂರ್ಗ್ಬಾಯ್ಸ್ ಓಪನ್, ಕೂರ್ಗ್ ನಾವಿಸ್ ಓಪನ್ , ನ್ಯೂಬಾಯ್ಸ್ ನಾವಿಸ್ ಓಪನ್, ಟಿ.ವಿಎಸ್ ಓಪನ್, 4 ಸ್ಟ್ರೋಕ್ ಓಪನ್, 2 ಸ್ಟ್ರೋಕ್ ಓಪನ್, ಮಾಡಿಫೈಡ್ ಓಪನ್, ಟಿವಿಎಸ್ ಮೊಪೇಡ್ ಕ್ಲಾಸ್ , ಸ್ಕೂಟರ್ ಓಪನ್ ಕ್ಲಾಸ್, ಕೆ.ಟಿಎಂ ಡ್ಯೂಕ್ ಓಪನ್, ಬುಲೆಟ್ ಓಪನ್, ಇಂಡಿಯನ್ ಓಪನ್ ಹಾಗೂ ಇಂಡಿಯನ್ ಎಕ್ಸ್ಪರ್ಟ್ ಸ್ಪರ್ಧೇ ನಡೆಯಿತು. ಸೌತ್ ಕೂರ್ಗ್ ಫಾರ್ಮರ್ಸ್ ಅಸೋಸಿಯೇಶನ್ ಅಧ್ಯಕ್ಷ ಚೆಪ್ಪುಡಿರ ಮಾಚಯ್ಯ, ಸೌತ್ ಕೂರ್ಗ್ ಫಾರ್ಮರ್ಸ್ ಅಸೋಸಿಯೇಶನ್ ಅಧ್ಯಕ್ಷ ಸಿ.ಡಿ. ಮಾದಪ್ಪ, ಸದಸ್ಯರಾದ ಸಿ.ಕೆ. ಬೋಪಣ್ಣ, ಕಿಲನ್ ಗಣಪತಿ, ಕುಲ್ಲಚಂಡ ಚಿಣ್ಣಪ್ಪ, ಪೂವಣ್ಣ, ಪಂದಿಯಂಡ ಹರೀಶ್ ಹಾಜರಿದ್ದರು.