ಕುಶಾಲನಗರ, ಅ. 4: ದೇಶೀಯ ಗೋ ತಳಿಗಳ ಸಂರಕ್ಷಣೆ ನಿಟ್ಟಿನಲ್ಲಿ ಶ್ರೀ ರಾಮಚಂದ್ರಾಪುರ ಮಠದ ಆಶ್ರಯದಲ್ಲಿ ಹಮ್ಮಿಕೊಂಡ ಮಂಗಲ ಗೋಯಾತ್ರೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ನಡೆಯುತ್ತಿರುವ ಗೋ ಕಿಂಕರ ಯಾತ್ರೆಯನ್ನು ಕುಶಾಲನಗರದಲ್ಲಿ ಸಾಂಪ್ರದಾಯಿಕವಾಗಿ ಬರಮಾಡಿ ಕೊಳ್ಳಲಾಯಿತು.
ಮಡಿಕೇರಿಯಿಂದ ಆಗಮಿಸಿದ ಯಾತ್ರೆಯನ್ನು ಕುಶಾಲನಗರದ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಪ್ರಮುಖರು ಬೈಚನಹಳ್ಳಿ ಮಾರಿಯಮ್ಮ ದೇವಾಲಯದ ಬಳಿ ಬರ ಮಾಡಿಕೊಂಡರು. ಮಾರಿಯಮ್ಮ ದೇವಾಲಯ ಮತ್ತು ಕುಶಾಲನಗರದ ಶ್ರೀ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಯಾತ್ರೆಯ ಉದ್ದೇಶದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಯಾತ್ರೆಯ ಪ್ರಮುಖರಾದ ಉತ್ತರಾಖಂಡ ಕಪಿಲಾಶ್ರಮದ ಶ್ರೀರಾಮಚಂದ್ರ ಸ್ವಾಮೀಜಿ, ಚಿ.ನಾ.ಸೋಮೇಶ್, ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿಜಯೇಂದ್ರ, ಪ್ರಮುಖರಾದ ಆರ್.ಎಸ್.ಕಾಶೀಪತಿ, ವಿ.ಎನ್. ವಸಂತಕುಮಾರ್, ಜಿ.ಎಲ್. ನಾಗರಾಜ್, ಪ್ರಕಾಶ್, ಅಮೃತ್ರಾಜ್, ಕೆ.ಎಸ್.ರಾಜಶೇಖರ್, ರಾಮದಾಸ್, ನಾರಾಯಣ, ವೈಶಾಖ್, ಪ್ರವೀಣ್ ಮತ್ತಿತರರು ಇದ್ದರು.