ಮಡಿಕೇರಿ, ಜು. 20: ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ವತಿಯಿಂದ 2016-17ನೇ ಸಾಲಿನಲ್ಲಿ ದೇವರಾಜ್ ಅರಸು ವಸತಿ ಯೋಜನೆಯಡಿ 20 ಸಾವಿರ ಮನೆಗಳ ನಿರ್ಮಾಣದ ಗುರಿಯನ್ನು ಅನುಷ್ಠಾನಗೂಳಿಸುವ ಬಗ್ಗೆ ಅರ್ಹ ವಿಶೇಷ ವರ್ಗಕ್ಕೆ ಸೇರಿದ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂಬಂಧ ನಮೂನೆ-1 ರಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿಯನ್ನು ನಗರಸಭೆ ಕಾರ್ಯಾಲಯದಲ್ಲಿ ಕಚೇರಿ ವೇಳೆಯಲ್ಲಿ ತಾ. 30 ರೊಳಗೆ ಪೌರಾಯುಕ್ತರು, ನಗರಸಭೆ, ಮಡಿಕೇರಿ ಇವರಿಗೆ ಸಲ್ಲಿಸುವದು. ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವದಿಲ್ಲ. ಅರ್ಜಿ ನಮೂನೆ ಮತ್ತು ಹೆಚ್ಚಿನ ವಿವರಗಳಿಗೆ ಕಚೇರಿಯ ಕೆಲಸದ ವೇಳೆಯಲ್ಲಿ ಖುದ್ದಾಗಿ ಬಂದು ಮಾಹಿತಿ ಪಡೆದುಕೊಳ್ಳತಕ್ಕದ್ದು.
ವಿಶೇಷ ವರ್ಗಕ್ಕೆ ಸೇರಿದ ಫಲಾನುಭವಿಗಳ ವಿವರ. ರಸ್ತೆ ಬದಿ-ಅಂಗಡಿಗಳು ಜಗಲಿಯಲ್ಲಿ ರಾತ್ರಿ ವೇಳೆ ಮಲಗುವ ನಿರ್ಗತಿಕರು, ವಿಕಲ ಚೇತನರು, ಕುಷ್ಠರೋಗದಿಂದ ಗುಣ ಮುಖರಾದವರು, ಹೆಚ್.ಐ.ವಿ. ಸೋಂಕಿತರು, ಮಂಗಳ ಮುಖಿಯರು, ಲೈಂಗಿಕ ಕಾರ್ಯಕರ್ತೆಯರು, ದೇವದಾಸಿಯರು, ವಿಧವೆಯರು, ಜೀತದಿಂದ ಮುಕ್ತರಾದವರು, ಸಫಾಯಿ ಕರ್ಮಚಾರಿಗಳು, ದೌರ್ಜನ್ಯಕ್ಕೆ ಒಳಗಾದವರು, ಮತೀಯ ಗಲಭೆ ಹಾಗೂ ಚಳುವಳಿಗಳಿಂದ ಹಾನಿಗೊಳಗಾದವರು, ಅಲೆಮಾರಿ ಜನಾಂಗದವರು, ವಿಶೇಷ ವೃತ್ತಿಪರ ಗುಂಪುಗಳು.
ಫಲಾನುಭವಿಗಳ ಅರ್ಹತೆ
ಫಲಾನುಭವಿಯು ಈ ಮೇಲೆ ತಿಳಿಸಿದ ಯಾವದಾದರು ಒಂದು ವಿಶೇಷ ವರ್ಗಕ್ಕೆ ಸೇರಿರಬೇಕು ಫಲಾನುಭವಿಯು ಆರ್ಥಿಕವಾಗಿ ಹಿಂದುಳಿದಿದ್ದು ವಾರ್ಷಿಕ ವರಮಾನ ನಗರ ಪ್ರದೇಶದಲ್ಲಿ 87,600ರ ಒಳಗೆ ಇರಬೇಕು. ಫಲಾನುಭವಿಯು ನಗರಸಭಾ ವ್ಯಾಪ್ತಿಯಲ್ಲಿ ಸ್ವಂತ ನಿವೇಶನ ಹೊಂದಿರಬೇಕು. ಬೇರೆ ಯಾವದೇ ಯೋಜನೆ/ಇಲಾಖೆಯಿಂದ ಈಗಾಗಲೇ ವಸತಿ ಸೌಲಭ್ಯ ಪಡೆದಿರಬಾರದು. ಸ್ವಂತ ಮನೆ ಹೊಂದಿರಬಾರದು.