ಮಡಿಕೇರಿ, ನ. 13: ಜಿಲಲೆಯ ವಿವಿಧೆಡೆಗಳಲ್ಲಿ ನೆಲೆಸಿರುವ ಹೊಸೊಕ್ಲು ಕುಟುಂಬಸ್ಥರು ಎಲ್ಲ ಸೇರಿ ಇಂದು ನಗರದ ರಾಜ ಬೀದಿಗಳಲ್ಲಿರುವ ಪ್ರತಿಮೆಗಳನ್ನು ಸ್ವಚ್ಛಗೊಳಿಸಿದರು.ರಾಷ್ಟ್ರದ ಅಪ್ರತಿಮ ಮಹಾದಂಡನಾಯಕ ಫೀ.ಮಾ. ಕೊಡಂದೇರ ಕಾರ್ಯಪ್ಪ, ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡ, ಜ. ಕೊಡಂದೇರ ತಿಮ್ಮಯ್ಯ, ಮಂಗೇರಿರ ಮುತ್ತಣ್ಣ ಪ್ರತಿಮೆಗಳು ಹಾಗೂ ರಾಷ್ಟ್ರಕವಿ ಕುವೆಂಪು ಪುತ್ಥಳಿಯನ್ನು ತೊಳೆದು ಸ್ವಚ್ಛಗೊಳಿಸಲಾಯಿತು.ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಡಿಕೇರಿ ನಗರಸಭಾಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಮಾತನಾಡಿ, ಪ್ರತಿಮೆಗಳು ರಾಷ್ಟ್ರೀಯ ಸಂಪತ್ತಾಗಿದ್ದು, ಅದನ್ನು ರಕ್ಷಿಸುವದು ಎಲ್ಲರ ಕರ್ತವ್ಯವಾಗಿದೆ. ಹೊಸೊಕ್ಲು ಕುಟುಂಬಸ್ಥರು ಪ್ರತಿಮೆಗಳನ್ನು ಸ್ವಚ್ಛಗೊಳಿಸುವ ಉತ್ತಮವಾದ ಕಾರ್ಯ ಮಾಡಿದ್ದು, ಇದು ಎಲ್ಲರಿಗೂ ಮಾದರಿಯಾಗಬೇಕೆಂದು ಆಶಿಸಿದರು.
ಈ ಸಂದರ್ಭ ನಗರಸಭಾ ಸದಸ್ಯ ಕೆ.ಎಸ್. ರಮೇಶ್, ಕೊಡಗು ಗೌಡ ಸಮಾಜದ ಕಾರ್ಯದರ್ಶಿ ಕೋಡಿ ಚಂದ್ರಶೇಖರ್, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕುಡೆಕಲ್ ಸಂತೋಷ್, ಹೊಸೊಕ್ಲು ಕುಟುಂಬದ ಅಧ್ಯಕ್ಷ ಹೊಸೊಕ್ಲು ಸೋಮಯ್ಯ, ಅಂತರ್ರಾಷ್ಟ್ರೀಯ ಓಟಗಾರ ಹೊಸೊಕ್ಲು ಚಿಣ್ಣಪ್ಪ, ನಿವೃತ್ತ ಅಧಿಕಾರಿ ಹೊಸೊಕ್ಲು ಬಾಲಕೃಷ್ಣ, ಕಾರ್ಯಕ್ರಮ ಸಂಚಾಲಕ ಹೊಸೊಕ್ಲು ಹೇಮರಾಜ್, ಸೇರಿದಂತೆ ಕುಟುಂಬಸ್ಥರು ಪಾಲ್ಗೊಂಡಿದ್ದರು.