ನಾಪೋಕ್ಲು, ಅ. 14: ಸಂಘ-ಸಂಸ್ಥೆಗಳು ಅಭಿವೃದ್ಧಿ ಹೊಂದ ಬೇಕಾದರೆ ದಾನಿಗಳ ಪಾತ್ರ ಅಪಾರವಾಗಿದೆ. ಇದರಿಂದಾಗಿ ಕೇರಿ, ಊರು, ನಾಡು ಉನ್ನತಿ ಹೊಂದಲು ಸಾಧ್ಯ ಎಂದು ನೆಲಜಿ ಗ್ರಾಮದ ಮೇಕಟ್‍ಕೇರಿ ಶ್ರೀ ಈಶ್ವರ ಅಭಿವೃದ್ಧಿ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಿ ಭಾಗವಹಿಸಿದ್ದ ನಾಪೋಕ್ಲು ಕೊಡವ ಸಮಾಜದ ನಿಕಟಪೂರ್ವ ಅಧ್ಯಕ್ಷ ಮಣವಟ್ಟೀರ ಮಾಚಯ್ಯ ಅಭಿಪ್ರಾಯಪಟ್ಟರು.
ಸಂಘ ಕೇರಿಯ ಸರ್ವತೋ ಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಎಲ್ಲರಿಗೂ ಮಾದರಿ ಸಂಘವಾಗಿದೆ ಎಂದರು. ನಿವೃತ್ತ ಶಿಕ್ಷಕ ಚಿರೋಟಿರ ತಮ್ಮಯ್ಯ ಮಾತನಾಡಿ, ಪರಂಪರಾಗತ ವಾಗಿ ತಮ್ಮ ಕೆಲವು ಆಚಾರ-ವಿಚಾರ, ಸಂಸ್ಕøತಿಗಳು ಈಗಿನ ಕಾಲಘಟ್ಟದಲ್ಲಿ ಕಣ್ಮರೆಯಾಗುತ್ತಿದ್ದು, ಅವುಗಳನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ಕೊಡವ ಸಮಾಜ ಮತ್ತು ಸಂಘ-ಸಂಸ್ಥೆಗಳದ್ದಾಗಿದೆ. ಇದಕ್ಕೆ ಸೂಕ್ತ ಮಾರ್ಗದರ್ಶನ ನೀಡುವಂತಾಗಬೇಕು ಎಂದರು. ನಾಪೋಕ್ಲು ಕೊಡವ ಸಮಾಜದ ನಿಕಟಪೂರ್ವ ಕಾರ್ಯದರ್ಶಿ ಬಾದುಮಂಡ ಮುತ್ತಪ್ಪ ಮಾತನಾಡಿ, ಕೊಡಗು ಪ್ರಪಂಚದಲ್ಲಿ ಅತೀ ವಿಶೇಷವನ್ನು ಹೊಂದಿದ ನಾಡಾಗಿದೆ. ಈಗಿನ ಜನಾಂಗ ಆಧುನಿಕತೆಗೆ ಮಾರು ಹೋಗಿ ನಾಡು ಬಿಡುತ್ತಿರುವದರಿಂದ ಸಂಸ್ಕøತಿಗೆ ಮಾರಕವಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಮಡಿಕೇರಿಯ ನಬಾರ್ಡ್ ವ್ಯವಸ್ಥಾಪಕ ಮುಂಡಂಡ ಪಟ್ಟು ನಾಣಯ್ಯ, ಜಿಲ್ಲಾ ಅರಣ್ಯ ಅಧಿಕಾರಿ ಮುಕ್ಕಾಟಿರ ಜಯ, ಕೇರಿಯರ ಹಿರಿಯರಾದ ಬದಂಜೆಟ್ಟೀರ ನಾಣಯ್ಯ, ಮೇಕಟ್‍ಕೇರಿ ಮರಣನಿಧಿ ಅಧ್ಯಕ್ಷ ಮಣವಟ್ಟೀರ ಪಾಪು ಚೆಂಗಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘದ ಕಟ್ಟಡದ ಸ್ಥಳ ದಾನಿ ಅಚ್ಚಾಂಡಿರ ಮುತ್ತಪ್ಪ, ಸಂಘದ ನೂತನ ಕೊಠಡಿಯ ಉದ್ಘಾಟನೆ ಯನ್ನು ನೆರವೇರಿಸಿದರು.
ಈ ಸಂದರ್ಭ 21 ವರ್ಷ ಸಂಘದಲ್ಲಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ ನಾಪನೆರವಂಡ ಪೊನ್ನಪ್ಪ ಅವರನ್ನು ಸಂಘದ ಪರವಾಗಿ ಮುಕ್ಕಾಟಿರ ವಿನಯ್ ಸನ್ಮಾನಿಸಿದರು. ವೇದಿಕೆಯಲ್ಲಿ ಚೀಯಕಪೂವಂಡ ಸಾಬು ಬೆಂಗಳೂರು, ಮಾಳೆಯಂಡ ಕುಟ್ಟಪ್ಪ, ಚೀಯಕಪೂವಂಡ ನಂಜಪ್ಪ, ಅಚ್ಚಾಂಡಿರ ವಾಸು ಬಿದ್ದಪ್ಪ, ಚೀಯಕ ಪೂವಂಡ ಎಂ. ಅಪ್ಪಚ್ಚು ಮಾಳೆಯಂಡ ವಿಜು ಅಪ್ಪಚ್ಚ, ಮಾಳೆಯಂಡ ಈರಪ್ಪ ಉಪಸ್ಥಿತರಿದ್ದರು. ಮಾಳೆಯಂಡ ಸುಹನ ಪೊನ್ನಣ್ಣ ಪ್ರಾರ್ಥಿಸಿದರೆ, ಸಂಘದ ಅಧ್ಯಕ್ಷ ಮಾಳೆಯಂಡ ಅಯ್ಯಪ್ಪ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಯಾಡಿದರು. ಕಾರ್ಯದರ್ಶಿ ಮುಕ್ಕಾಟಿರ ವಿನಯ್ ವರದಿ ವಾಚಿಸಿ, ಮಣವಟ್ಟೀರ ಪಾಪು ಚೆಂಗಪ್ಪ ವಂದಿಸಿದರು.