ಮಡಿಕೇರಿ, ಸೆ. 17: ಮಡಿಕೇರಿ ನಗರದಲ್ಲಿ ದಸರಾ ಜನೋತ್ಸವಕ್ಕೆ ಮುಂಚಿತವಾಗಿ ಇಂದಿನ ಗಣೇಶ ವಿಸರ್ಜನೋತ್ಸವ ದಸರಾವನ್ನು ನೆನಪಿಸಿದಂತಿತ್ತು.

ಶಾಂತಿನಿಕೇತನ ಯುವಕ ಸಂಘ 38ನೇ ವರ್ಷದ ಗಣೇಶೋತ್ಸವವನ್ನು ಆಚರಿಸುತ್ತಿದ್ದು, ಪ್ರತಿಬಾರಿಯೂ ವಿಭಿನ್ನ ರೀತಿಯಲ್ಲಿ ಕಲಾಕೃತಿ ಅಳವಡಿಸಿಕೊಂಡು ಉತ್ಸವ ಆಚರಿಸಿಕೊಂಡು ಬರುತ್ತಿದೆ.

ಈ ಬಾರಿಯ ಶೋಭಾಯಾತ್ರೆಯ ಮಂಟಪದಲ್ಲಿ ಗಣೇಶ ಪುರಾಣದಿಂದ ಆಯ್ಕೆ ‘ಗರಿಕೆ ಮಹಾತ್ಮೆ’ ಕಥಾ ಸಾರಂಶವನ್ನು ಅಳವಡಿಸಲಾಗಿತ್ತು. ಉತ್ಸವ ಮಂಟಪದೊಂದಿಗೆ ಶೋಭಾಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿ ನೋಡುಗರಿಗೆ ಮಿನಿ ದಸರಾವನ್ನು ನೆನಪಿಸುವಂತಾಗಿತ್ತು. ಮಧ್ಯರಾತ್ರಿ ಬಳಿಕ ಗೌರಿ ಕೆರೆಯಲ್ಲಿ ವಿಸರ್ಜಿಸಲಾಯಿತು. -ಚಂದ್ರ