ವೀರಾಜಪೇಟೆ, ಆ. 31: ಕೂರ್ಗ್ ಮಾಕ್ರ್ಸ್‍ಮೆನ್ ಸಂಸ್ಥೆ ವೀರಾಜಪೇಟೆ ಇದರ ಆಶ್ರಯದಲ್ಲಿ ಕೈಲ್‍ಮುಹೂರ್ತ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ 5ನೇ ವರ್ಷದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ತಾ. 3 ರಂದು ಮಧ್ಯಾಹ್ನ 2.30 ಗಂಟೆಗೆ ವೀರಾಜಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದೆ.

ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ ಕ್ರಮವಾಗಿ ರೂ. 15,000, ರೂ. 10,000 ಹಾಗೂ ರೂ. 5,000ಗಳ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಗಳನ್ನು ನೀಡಲಾಗುವದು. ದ್ವಿತೀಯ ಬಹುಮಾನವನ್ನು ವೀರಾಜಪೇಟೆಯ ಸಿಹೆಚ್‍ಎ ಮಾಜಿ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ನೀಡಿದ್ದಾರೆ. ವೈಯಕ್ತಿಕ ಟ್ರೋಫಿಗಳನ್ನು ಭಾರತದ ವಾಲಿಬಾಲ್ ತಂಡದ ಮಾಜಿ ನಾಯಕ ಅಂತರ್ರಾಷ್ಟ್ರೀಯ ಆಟಗಾರ ಬೆಂಗಳೂರು ನಿವಾಸಿ, ಬಲ್ಲಚಂಡ ಅಮನ್ ನೀಡಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯನ್ನು ಕೂರ್ಗ್ ಮಾಕ್ರ್ಸ್ ಮೆನ್ ಸಂಸ್ಥೆಯ ಸದಸ್ಯ ಮುಕ್ಕಾಟಿರ ಕ್ಯಾಟಿ ಉತ್ತಪ್ಪ ನೀಡಿದ್ದಾರೆ. ಸ್ಪರ್ಧೆಯ ಅಂತಿಮ ಬಹುಮಾನ ವಿತರಣಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ವೀರಾಜಪೇಟೆಯ ಮಹಿಳಾ ಹಾಕಿ ಸಂಸ್ಥೆಯ ಮಾಜಿ ಅಧ್ಯಕ್ಷೆ ಕೋದಂಡ ಸ್ವಾತಿ ಬೋಪಣ್ಣ ಆಗಮಿಸುವರು ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಸಿ. ಕಾರ್ಯಪ್ಪ, ಸಂಸ್ಥೆಯ ಕಾರ್ಯದರ್ಶಿ ಸಂಪಿ ಪೂಣಚ್ಚ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಮೊ. 9482246390 ಅನ್ನು ಸಂಪರ್ಕಿಸಬಹುದು.