ಮೂರ್ನಾಡು, ಸೆ. 2: ತುಳುವೆರ ಜನಪದ ಕೂಟ ಮತ್ತು ಸಾಂಸ್ಕøತಿಕ ಸಂಘಟನೆಯ ಮೂರ್ನಾಡು ಹೋಬಳಿ ಘಟಕದ ಸಭೆ ನಡೆಯಿತು.

ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾದ ಸಮಾರಂಭವನ್ನು ಮಡಿಕೇರಿ ತಾಲೂಕು ತುಳುವೆರ ಜನಪದ ಕೂಟ ಮತ್ತು ಸಾಂಸ್ಕøತಿಕ ಸಂಘಟನೆ ಅಧ್ಯಕ್ಷ ಪ್ರಭು ರೈ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸಂಘಟನೆ ರಚಿಸಿದರೆ ಸಾಲದು ಅವುಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುವಂತಾಗಬೇಕು ಎಂದು ತಿಳಿಸಿದರು. ವೇದಿಕೆಯಲ್ಲಿ ಬಂಟರ ಸಂಘದ ಅಧ್ಯಕ್ಷ ಬಿ.ಡಿ. ನಾರಾಯಣ ರೈ, ತುಳುವೆರ ಜನಪದ ಕೂಟ ಮತ್ತು ಸಾಂಸ್ಕøತಿಕ ಸಂಘಟನೆ ಪ್ರಧಾನ ಕಾರ್ಯದರ್ಶಿ ರವಿ, ಕುಲಾಲ ಸಮಾಜದ ಜಿಲ್ಲಾಧ್ಯಕ್ಷ ನಾಣಯ್ಯ, ಬಿಲ್ಲವ ಸಮಾಜ ಕಾರ್ಯದರ್ಶಿ ಬಿ.ಎಸ್. ಜಯಪ್ಪ, ಐತಪ್ಪ ರೈ, ಲಕ್ಷ್ಮಿ ಪ್ರಸಾದ್ ಪೇರಳ, ಲೊಕೇಶ್, ಸುಜಾತ, ಅಶೋಕ್ ಆಚಾರ್ಯ ಇನ್ನಿತರರು ಇದ್ದರು. ಈ ಸಂದರ್ಭದಲ್ಲಿ ಮೂರ್ನಾಡು ಹೋಬಳಿ ಘಟಕವನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಗಿರೀಶ್ ರೈ, ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ತಿಮ್ಮಪ್ಪ ಅವರನ್ನು ಆಯ್ಕೆ ಮಾಡಲಾಯಿತು.