ಮಡಿಕೇರಿ, ಜ. 19: ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗಾಗಿ ರೋಟರಿ ಮಿಸ್ಟಿ ಹಿಲ್ಸ್, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಫೋಬಿಕ್ಸ್ ಫುಡ್ಸ್ ಅಂಡ್ ಬಯೋಟೆಕ್ನಾಲಜಿ ಕನ್ಸಲ್‍ಟೆನ್ಸಿ ಸರ್ವಿಸಸ್ ಎಲ್‍ಎಲ್‍ಪಿ, ಮೈಸೂರು ಇವರ ಸಹಯೋಗದಲ್ಲಿ ತಾ. 21 ರಂದು ಬೆಳಿಗ್ಗೆ 10 ಗಂಟೆಗೆ ನಗರದ ರೋಟರಿ ಸಭಾಂಗಣದಲ್ಲಿ ಚಾಕೊಲೇಟ್ ಮತ್ತು ಚಾಕೊಲೇಟ್ ಕನ್‍ಫೆಕ್ಷನರಿ ಇಂಡಸ್ಟ್ರಿ ಕುರಿತು ವಿಚಾರ ಸಂಕಿರಣ ನಡೆಯಲಿದೆ.

ಅಧ್ಯಕ್ಷತೆಯನ್ನು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ರಾಮಕೃಷ್ಣಗೌಡ ವಹಿಸಲಿದ್ದು, ಅತಿಥಿಗಳಾಗಿ ಪೊನ್ನಂಪೇಟೆ ಸಿಐಟಿ ಅಧ್ಯಕ್ಷ ಸಿ.ಪಿ. ಬೆಳ್ಯಪ್ಪ, ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಕೇಶವ ಪ್ರಸಾದ್, ಬೆಂಗಳೂರು ಕೆಸಿಟಿಯು ವ್ಯವಸ್ಥಾಪಕ ನಿರ್ದೇಶಕ ಅನಿಲ್ ಉಪ್ಪಿನ್ ಮತ್ತಿತರರು ಪಾಲ್ಗೊಳ್ಳುವÀರು.

ಈ ವಿಚಾರ ಸಂಕಿರಣದಲ್ಲಿ ನುರಿತ ಆಹಾರ ತಜ್ಞರಿಂದ ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಸಂಬಂಧಪಟ್ಟಂತೆ ವಿಚಾರ ವಿನಿಮಯ ಹಾಗೂ ಮಾಹಿತಿಯನ್ನು ಭಾವೀ ಉದ್ದಿಮೆದಾರರಿಗೆ ನೀಡಲಾಗುವದು. ಆಸಕ್ತರು ತಾ. 21 ರೊಳಗೆ ಜಿಲ್ಲಾ ಕೈಗಾರಿಕಾ ಕೇಂದ್ರವನ್ನು ಖುದ್ದಾಗಿ ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ನೋಂದಣಿ ಹಾಗೂ ಕಾರ್ಯಕ್ರಮಕ್ಕೆ ಯಾವದೇ ರೀತಿಯ ಶುಲ್ಕವಿರುವದಿಲ್ಲ. ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ: 08272-228431ನ್ನು ಸಂಪರ್ಕಿಸಲು ಕೋರಿದೆ. ಈಗಾಗಲೇ ನೋಂದಣಿ ಮಾಡಿದವರು ಪುನಃ ನೋಂದಣಿ ಮಾಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.