ಮಡಿಕೇರಿ, ನ. 25: ಮಡಿಕೆÉೀರಿ ತಾಲೂಕು ಮಟ್ಟದ ಯುವ ಜನಮೇಳ ತಾ. 27 ರಂದು (ನಾಳೆ) ತಾಳತ್‍ಮನೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಲಿದ್ದು, ವೈವಿಧ್ಯಮಯ ಸ್ಪರ್ಧೆ ಗಳನ್ನು ಆಯೋಜಿಸಲಾಗಿದೆಯೆಂದು ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಡಿಕೆÉೀರಿ ತಾಲೂಕು ಯುವ ಒಕ್ಕೂಟ, ನೇತಾಜಿ ಯುವಕ ಮತ್ತು ಯುವತಿ ಮಂಡಲದ ಸಂಯುಕ್ತ ಆಶ್ರಯದಲ್ಲಿ ನಡೆಯುವ ಯುವಜನ ಮೇಳದ ಕುರಿತು ಮಾಹಿತಿ ನೀಡಿದರು.

ನೇತಾಜಿ ಯುವಕ ಹಾಗೂ ಯುವತಿ ಮಂಡಲದ ಬೆಳ್ಳಿ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಯುವಜನ ಮೇಳವನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೆÉೀಶ್ವರಿ ಗೋಪಾಲ್ ಉದ್ಘಾಟಿಸಲಿದ್ದಾರೆ. ಮದೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಬಿ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಪಿ. ಶಶಿ ಸುಬ್ರಮಣಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಯಾಲದಾಳು ಪದ್ಮಾವತಿ, ಮದೆ ಗ್ರಾ.ಪಂ. ಸದಸ್ಯೆ ಪೊನ್ನೆಟ್ಟಿ ನಿತ್ಯಾಕುಮಾರಿ ಪಾಲ್ಗೊಳ್ಳಲಿದ್ದಾರೆ.

ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ, ಸದಸ್ಯ ಕೊಡಪಾಲು ಗಣಪತಿ, ಮದೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬಿ.ಎಸ್. ರತ್ನ, ಸದಸ್ಯರಾದ ಗಿರೀಶ್ ತಾಳತ್‍ಮನೆ ಪಾಲ್ಗೊಳ್ಳಲಿ ದ್ದಾರೆ ಎಂದು ನವೀನ್ ದೇರಳ ತಿಳಿಸಿದರು.

ಯುವಜನ ಮೇಳದ ಅಂಗವಾಗಿ ಭಾವಗೀತೆ, ರಂಗಗೀತೆ, ಲಾವಣಿ, ಏಕಪಾತ್ರಾಭಿನಯ, ಗೀಗಿಪದ, ಭಜನೆ, ಜಾನಪದ ಗೀತೆ, ಕೋಲಾಟ, ಜಾನಪದ ನೃತ್ಯ, ಜೋಳ ರಾಗಿ ಬೀಸುವ ಪದ ಹಾಗೂ ಸೋಬಾನೆ ಪದದ ಸ್ಪರ್ಧೆಗಳು ನಡೆಯಲಿವೆ.

ಗೋಷ್ಠಿಯಲ್ಲಿ ಮಡಿಕೆÉೀರಿ ತಾಲೂಕು ಯುವ ಒಕ್ಕೂಟದ ಕಾರ್ಯದರ್ಶಿ ರಮೇಶ್ ಆಚಾರ್ಯ, ನೇತಾಜಿ ಯುವಕ ಮಂಡಲದ ಅಧ್ಯಕ್ಷ ಎಂ.ಎ. ಮಹಮ್ಮದ್ ರಫೀಕ್, ಯುವತಿ ಮಂಡಳಿ ಅಧ್ಯಕ್ಷೆ ಎ.ಆರ್. ನೇತ್ರಾವತಿ, ಸದಸ್ಯೆ ಮಂಜುಳಾ ಹಾಗೂ ಸಂಪಾಜೆ ಘಟಕದ ಅಧ್ಯಕ್ಷ ಕೆ.ಕೆ. ಗಣೇಶ್ ಉಪಸ್ಥಿತರಿದ್ದರು.