ಸೋಮವಾರಪೇಟೆ, ಜೂ.16: ಈ ಹಿಂದೆ ಇದ್ದಂತೆ ತಾಲೂಕು ಮಟ್ಟದಲ್ಲಿಯೇ ಅಕ್ರಮ - ಸಕ್ರಮ ಸಮಿತಿ ಸಭೆ ನಡೆಸಲು ಕ್ರಮ ಕೈಗೊಳ್ಳಲಾಗುವದು. ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿ ವಿಧಾನ ಸಭಾ ಅಧಿವೇಶನದಲ್ಲಿ ಚರ್ಚೆ ನಡೆಸುವದಾಗಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ಇಲ್ಲಿನ ತಾಲೂಕು ಕಚೇರಿಯಲ್ಲಿ ಆಯೋಜಿಸಲಾಗಿದ್ದ ಅಕ್ರಮ -ಸಕ್ರಮ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಹಿಂದೆ ತಾಲೂಕು ಮಟ್ಟದಲ್ಲಿಯೇ ಅಕ್ರಮ -ಸಕ್ರಮ ಅರ್ಜಿಗಳು ವಿಲೇವಾರಿ ಯಾಗುತ್ತಿದ್ದವು. ಈಗಿನ ಸರ್ಕಾರ ಇದನ್ನು ಕ್ಷೇತ್ರಮಟ್ಟಕ್ಕೆ ನಿಗದಿಗೊಳಿಸಿ ರುವದರಿಂದ ಸಾರ್ವಜನಿಕರಿಗೆ ಕಷ್ಟವಾಗುತ್ತಿದೆ ಎಂದರು.
ಮಡಿಕೇರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ಹಾಗೂ ಮಡಿಕೇರಿ ತಾಲೂಕುಗಳು ಒಳಪಡಲಿದ್ದು, ಸೋಮವಾರಪೇಟೆ ವ್ಯಾಪ್ತಿಯ ಕಡತಗಳನ್ನು ಮಡಿಕೇರಿಗೆ, ಮಡಿಕೇರಿ ವ್ಯಾಪ್ತಿಯ ಕಡತಗಳನ್ನು ಸೋಮವಾರಪೇಟೆಗೆ ಸಾಗಿಸ ಬೇಕಾಗಿದೆ. ಇದರೊಂದಿಗೆ ಅರ್ಜಿದಾರರು ಹಾಗೂ ಸಾರ್ವಜನಿಕ ರಿಗೂ ತೊಂದರೆಯಾಗುತ್ತಿದ್ದು, ಇದನ್ನು ತಡೆಗಟ್ಟಲು ತಾಲೂಕುವಾರು ಅರ್ಜಿಗಳ ವಿಲೇವಾರಿಗೆ ಅವಕಾಶ ಕಲ್ಪಿಸಬೇಕೆಂದು ವಿಧಾನ ಸಭೆಯಲ್ಲಿ ಚರ್ಚಿಸಲಾಗುವದು ಎಂದು ಅಪ್ಪಚ್ಚು ರಂಜನ್ ತಿಳಿಸಿದರು.
ಅಕ್ರಮ -ಅಕ್ರಮ ಸಮಿತಿಯಲ್ಲಿ ವಿಲೇವಾರಿಯಾಗುವಂತಹ ಅರ್ಜಿಗಳನ್ನು ಮಾತ್ರ ಸಭೆಗೆ ತರಬೇಕು. ತಿರಸ್ಕøತಗೊಳ್ಳುವ ಅರ್ಜಿಗಳನ್ನು ಸಭೆಗೆ ತರುವದು ಬೇಡ. ಸದ್ಯ 2 ಸಾವಿರ ಅರ್ಜಿಗಳು ಸೋಮವಾರಪೇಟೆ ವ್ಯಾಪ್ತಿಯಲ್ಲಿ ವಿಲೇವಾರಿಗೆ ಬಾಕಿ ಉಳಿದಿದೆ. ನಾವುಗಳು ಸಭೆಯಲ್ಲಿ ವಿಲೇವಾರಿ ಮಾಡಿದ ಅರ್ಜಿಗಳನ್ನು ಸರ್ಕಾರ ತಡೆಹಿಡಿದು ರೈತರಿಂದ ಜಮೀನನ್ನು ವಾಪಸ್ ಪಡೆಯಲು ಮುಂದಾಗುತ್ತಿದೆ ಎಂದರು.
ಪ್ರತಿ ಸಭೆಯಲ್ಲಿ ಕನಿಷ್ಟ 50 ಅರ್ಜಿಗಳನ್ನು ವಿಲೇವಾರಿ ಮಾಡುವಂತಾಗಬೇಕು. ಈ ಹಿನ್ನೆಲೆ ಅಧಿಕಾರಿಗಳು ಅರ್ಜಿಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಹಾಜರಿದ್ದ ಸಮಿತಿ ಸದಸ್ಯರುಗಳು ಒತ್ತಾಯಿಸಿದರು.
ಸಭೆಯಲ್ಲಿ ಸೋಮವಾರಪೇಟೆ ತಾಲೂಕು ತಹಸೀಲ್ದಾರ್ ಬಿ.ಸಿ. ಶಿವಪ್ಪ, ಮಡಿಕೇರಿ ತಹಶೀಲ್ದಾರ್ ಕುಂಞಮ್ಮ, ಸಮಿತಿ ಸದಸ್ಯರುಗಳಾದ ಹೆಚ್.ಸಿ. ನಾಗೇಶ್, ಫಿಲೋಮಿನಾ, ಎಂ.ಡಿ. ಸುಬ್ಬಯ್ಯ, ಎಲ್ಲಾ ಹೋಬಳಿಗಳ ಕಂದಾಯ ಪರಿವೀಕ್ಷಕರುಗಳು ಉಪಸ್ಥಿತರಿದ್ದರು.