ಭಾಗಮಂಡಲ, ನ. 17: ಕಾವೇರಿ ಜಾತ್ರೆಯ ಹಿನ್ನೆಲೆಯಲ್ಲಿ ಮಾತ್ರ ಕಾವೇರಿಗೆ ತೊಡಿಸಲು ಕೊಂಡೊಯ್ಯ ಲಾಗಿದ್ದ ಚಿನ್ನಾಭರಣವನ್ನು ಇಂದು ಭಾಗಮಂಡಲ ಭಗಂಡೇಶ್ವರ ದೇವಾಲಯಕ್ಕೆ ತಂದಿಡಲಾಯಿತು.

ಬಳಿಕ ತುಲಮಾಸದ ಎರಡನೇ ಹಂತ ಕಾಣಿಕೆ ಹಣವನ್ನು ಎಣಿಸಲಾಯಿತು. ತಲಕಾವೇರಿಯಲ್ಲಿ 4,46,697 ರೂ. ಭಾಗಮಂಡಲದಲ್ಲಿ 3,22,438 ರೂ. ಕಾಣಿಕೆ ಹಣ ಸಂಗ್ರವಾಗಿದೆ. ಈ ಸಂದರ್ಭ ದೇವಾಲಯ ಆಡಳಿತಾಧಿಕಾರಿ, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ತಹಶೀಲ್ದಾರ್ ಕುಸುಮ, ತಕ್ಕರು ಹಾಜರಿದ್ದರು.