ಶ್ರೀಮಂಗಲ, ಸೆ. 7: ಕೊಡಗಿನ ಕಾವೇರಿ ನದಿ ನೀರನ್ನು ಕರ್ನಾಟಕದ ಜನರು ಪ್ರತಿದಿನ ಕುಡಿಯುತ್ತಿದ್ದು ಮೈಸೂರು, ಬೆಂಗಳೂರು ಹಾಗೂ ಇತರ ಪ್ರದೇಶಗಳಲ್ಲಿ ವಾಸವಿರುವ ಕೊಡಗಿನ ಲಕ್ಷಾಂತರ ಜನರಿಗೆ ಇದೀಗ ಕುಡಿಯುವ ನೀರಿನ ಕೊರತೆಯಿಂದ ತೊಂದರೆಯಾಗಿದೆ. ನೀರಿನ ವಾಸ್ತವಾಂಶ ತಿಳಿಯದೆ ಸುಪ್ರೀಂ ಕೋರ್ಟಿಗೆ ಸುಳ್ಳು ಮಾಹಿತಿ ನೀಡಿರುವ ಸರಕಾರ ರಾಜ್ಯದ ಜನರಿಗೆ ಅನ್ಯಾಯ ಮಾಡಿದೆ ಎಂದು ಶ್ರೀಮಂಗಲ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಎಂ.ಟಿ. ಕಾರ್ಯಪ್ಪ ತಿಳಿಸಿದ್ದಾರೆ.

ಅವರು ಪತ್ರಿಕಾ ಹೇಳಿಕೆಯಲ್ಲಿ ಬೆಂಗಳೂರು-ಮೈಸೂರಿನಂತಹ ನಗರಗಳಲ್ಲಿ ಕೊಡಗಿನ ಲಕ್ಷಾಂತರ ಜನರಿಗೆ ಇದರಿಂದ ತುಂಬಾ ತೊಂದರೆ ಯಾಗಿದೆ. ರಾಜಕೀಯ ಲಾಭಕ್ಕಾಗಿ ನಮ್ಮ ಜನರಿಗೆ ಅನ್ಯಾಯ ಮಾಡುತ್ತಿ ರುವ ಇಂತಹ ಸರಕಾರದÀ ವಿದುದ್ಧ ಜನರು ಪ್ರತಿಭಟಿಸಬೇಕಿದೆ. ಮುಂದಿನ ಚುನಾವಣೆಯಲ್ಲಿ ಈ ಸರಕಾರಕ್ಕೆ ತಕ್ಕ ಪಾಠ ಜನತೆ ಕಲಿಸಬೇಕಿದೆ. ಇದೀಗ ಮಂಡ್ಯ-ಮೈಸೂರು ಭಾಗದ ಸಾವಿರಾರು ರೈತರು ನೀರಿಲ್ಲದೆ ಬೀದಿ ಪಾಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಕೊಡಗಿನ ಜನಪ್ರತಿನಿಧಿಗಳೂ ಕೂಡ ಈ ಬಗ್ಗೆ ಮೌನವಹಿಸದೆ ತಮ್ಮ ಅಭಿಪ್ರಾಯ ಸ್ಪಷ್ಟಪಡಿಸಬೇಕು. ಮಂಡ್ಯ ಮೈಸೂರು ಜನರ ಸಮಸ್ಯೆ ಮಾತ್ರ ಎಂದು ಪರಿಗಣಿಸದೆ ಹೋರಾಟ ಮಾಡಬೇಕು. ಕೊಡಗು ಜಿಲ್ಲೆಯ ಸಾವಿರಾರು ಜನತೆ ಹೊರಜಿಲ್ಲೆಗಳಲ್ಲಿ ಶಿಕ್ಷಣ ಹಾಗೂ ಉದ್ಯೋಗ ನಿಮಿತ್ತ ನೆಲೆಸಿದ್ದಾರೆ. ನೀರಿನ ಅಭಾವದಿಂದ ಇವರು ಮುಂದಿನ ದಿನಗಳಲ್ಲಿ ಇವರು ಕೊಡಗಿಗೆ ಹಿಂತಿರುಗಿ ಬರಬೇಕಾಗುವ ಪರಿಸ್ಥಿತಿ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ತಾ 9ರ ರಾಜ್ಯ ಬಂದ್‍ಗೆ ಸಮಿತಿ ಬೆಂಬಲ ನೀಡುತ್ತದೆ ಎಂದು ತಿಳಿಸಿದ್ದಾರೆ.